ಪ್ರಯತ್ನಕ್ಕಿಂತ ಪ್ರಾರ್ಥನೆಯಿಂದ ಹೆಚ್ಚು ಫಲ ಸಿಗುತ್ತದೆ ಎಂದು ತಲಕಾಡುನಲ್ಲಿ ಪುಣ್ಯಸ್ನಾನ ಮಾಡಿ ಹೇಳಿದ ಶಿವಕುಮಾರ್

ಅರುಣ್​ ಕುಮಾರ್​ ಬೆಳ್ಳಿ

Updated on: Feb 12, 2025 | 12:27 PM

ಹಾಗೆ ನೋಡಿದರೆ ಟೀ ನರಸೀಪುರ ತ್ರಿವೇಣಿ ಸಂಗಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪುಣ್ಯ ಸ್ನಾನ ಮಾಡಬೇಕಿತ್ತು, ಅದರೆ ಅವರು ಮೊಣಕಾಲಿನ ಚಿಕಿತ್ಸೆಗೊಳಗಾಗಿ ವ್ಹೀಲ್ ಚೇರಲ್ಲಿ ಓಡಾಡುತ್ತಿರುವುದರಿಂದ ಶಿವಕುಮಾರ್ ಅವರನ್ನೇ ಇಲ್ಲಿಗೆ ಬರಲು ಹೇಳಿದ್ದರಂತೆ. ಅದೆಲ್ಲ ಸರಿ, ಶಿವಕುಮಾರ್ ಅವರು ಕೊನೆಯಲ್ಲಿ ಎಲ್ಲರೂ ಪ್ರಯಾಗ್​ರಾಜ್ ಕುಂಭಮೇಳದಲ್ಲಿ ಭಾಗಿಯಾಗಬೇಕು ಅಂತೇನಿಲ್ಲ ಎಂದು ಹೇಳುವುದು ಅರ್ಥವಾಗಲ್ಲ!

ಮೈಸೂರು: ಉತ್ತರ ಪ್ರದೇಶದ ಪ್ರಯಾಗ್​ರಾಜ್ ಮತ್ತು ಮೈಸೂರು ಜಿಲ್ಲೆಯ ತಲಕಾಡು ತ್ರಿವೇಣಿ ಸಂಗಮ ಎರಡೂ ಕಡೆ ಪುಣ್ಯಸ್ನಾನ ಮಾಡಿದವರು ಬಹಳ ಜನ ಇರಲಾರರು. ಆದರೆ ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಎರಡೂ ಕಡೆ ಮುಳುಗು ಹಾಕಿ ಪುಣ್ಯ ಪ್ರಾಪ್ತಿ ಮಾಡಿಕೊಂಡಿದ್ದಾರೆ. ಟೀ ನರಸೀಪುರ ಬಳಿ ಕಾವೇರಿ, ಕಪಿಲಾ ಮತ್ತು ಸ್ಫಟಿಕ ನದಿಗಳು ಕೂಡುವ ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಭಾಗಿಯಾಗಿ ಪುಣ್ಯಸ್ನಾನ ಮಾಡಿದ್ದರ ಬಗ್ಗೆ ಮತ್ತು ಅದರ ಇತಿಹಾಸದ ಬಗ್ಗೆ ಶಿವಕುಮಾರ್ ಬಹಳ ಅಭಿಮಾನದಿಂದ ಮಾತಾಡುತ್ತಾರೆ. ಪುಣ್ಯಸ್ನಾನದ ಬಗ್ಗೆ ಹೇಳುವಾಗ ಅವರು ಪ್ರಯತ್ನಕ್ಕಿಂತ ಪ್ರಾರ್ಥನೆಯಿಂದ ಹೆಚ್ಚು ಫಲ ಸಿಗುತ್ತದೆ ಎಂದು ಅವರು ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಮಹಾಕುಂಭ; ತ್ರಿವೇಣಿ ಸಂಗಮದಲ್ಲಿ ಕುಟುಂಬದೊಂದಿಗೆ ಮುಖೇಶ್ ಅಂಬಾನಿ ಪವಿತ್ರ ಸ್ನಾನ

Published on: Feb 12, 2025 11:23 AM
Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.