ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆ ಮೇಲೆ 7 ವರ್ಷ ಬಾಲಕನ ಡ್ಯಾನ್ಸ್; ಜಡ್ಜ್​ಗಳೇ ಶಾಕ್

Updated on: Nov 21, 2025 | 11:57 AM

ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಹೊಸ ಸೀಸನ್ ಆರಂಭ ಆಗಿದೆ. ಈ ವೇದಿಕೆ ಮೇಲೆ ಆಡಿಷನ್ ಮಾಡಿದ ಅನೇಕ ಸೆಲೆಬ್ರಿಟಿಗಳು ಆಗಮಿಸಿದ್ದಾರೆ. ಅವರಲ್ಲಿ ಏಳು ವರ್ಷದ ಬಾಲಕ ಕೂಡ ಇದ್ದ. ಅವನ ಡ್ಯಾನ್ಸ್ ನೋಡಿ ಅನೇಕರು ಶಾಕ್ ಆಗಿದ್ದಾರೆ. ಅದಕ್ಕೆ ಕಾರಣ ಇಲ್ಲಿದೆ.

‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 5’ರಲ್ಲಿ ಗದಗದಿಂದ ಪ್ರೀತಂ ಎಂಬ ಬಾಲಕ ಬಂದಿದ್ದಾನೆ. ಆತನಿಗೆ ಇನ್ನೂ ಏಳುವರ್ಷ. ಆದರೆ, ಅವನ ಪ್ರತಿಭೆ ಮಾತ್ರ ವಯಸ್ಸಿಗೂ ಮೀರಿದ್ದು. ಅವರ ಪ್ರತಿಭೆ ನೋಡಿ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. ಜಡ್ಜ್​ಗಳು ಈ ಪ್ರತಿಭೆಯನ್ನು ಕಂಡು ಶಾಕ್ ಆಗಿದ್ದಾರೆ. ಆ ಸಂದರ್ಭದ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.