“ಬ್ರೋ ಕೊನೆಗೂ ಪ್ರೀತಿ ಜಿಂಟಾ ಅಪ್ಪುಗೆ ಸಿಕ್ತು!”; ಅರ್ಶ್‌ದೀಪ್ ಸಿಂಗ್ ಫುಲ್ ಖುಷ್

Updated on: Apr 20, 2026 | 12:16 PM

ಪಂಜಾಬ್ ಕಿಂಗ್ಸ್‌ನ ಐಪಿಎಲ್ ಗೆಲುವಿನ ನಂತರ, ಮಾಲೀಕಿ ಪ್ರೀತಿ ಜಿಂಟಾ ವೇಗಿ ಅರ್ಷ್‌ದೀಪ್ ಸಿಂಗ್‌ಗೆ ಆತ್ಮೀಯವಾಗಿ ಅಪ್ಪಿಕೊಂಡ ಕ್ಷಣ ವೈರಲ್ ಆಗಿದೆ. ಅರ್ಷ್‌ದೀಪ್ ಸಂಭ್ರಮಿಸಿದ ಈ ಫೋಟೋಗಳನ್ನು ನೆಟ್ಟಿಗರು ಮೊಹಮ್ಮದ್ ಶಮಿ ಅವರನ್ನು ಟ್ರೋಲ್ ಮಾಡಲು ಬಳಸಿದ್ದಾರೆ. ಶಮಿಗೆ ಇಂತಹ 'ಹಗ್' ಸಿಗದೆ ಕಾಯುತ್ತಿದ್ದಾರೆ ಎಂದು ಅಭಿಮಾನಿಗಳು ತಮಾಷೆ ಮಾಡುತ್ತಿದ್ದಾರೆ, ಇದು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಹರಿದಾಡುತ್ತಿದೆ.

ಮುಂಬೈ, ಏ.20: ಐಪಿಎಲ್ ಅಖಾಡದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ಭರ್ಜರಿ ಗೆಲುವು ಸಾಧಿಸಿದ ಬೆನ್ನಲ್ಲೇ, ಮೈದಾನದಲ್ಲಿ ನಡೆದ ಒಂದು ಕ್ಷಣ ಈಗ ಸಖತ್ ವೈರಲ್ ಆಗಿದೆ. ಪಂಜಾಬ್ ತಂಡದ ಮಾಲೀಕಿ, ಬಾಲಿವುಡ್ ನಟಿ ಪ್ರೀತಿ ಜಿಂಟಾ (Preity Zinta) ತಮ್ಮ ತಂಡದ ವೇಗಿ ಅರ್ಷ್‌ದೀಪ್ ಸಿಂಗ್ ಅವರನ್ನು ಆತ್ಮೀಯವಾಗಿ ಅಪ್ಪಿಕೊಂಡು ಗೆಲುವಿನ ಶುಭಾಶಯ ಕೋರಿದ್ದಾರೆ. ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಅರ್ಷ್‌ದೀಪ್ ಸಿಂಗ್, ಪ್ರೀತಿ ಜಿಂಟಾ ಅವರಿಂದ ಹಗ್ (Warm Hug) ಸಿಗುತ್ತಿದ್ದಂತೆ ಅತೀವ ಸಂತೋಷಗೊಂಡರು. ಅರ್ಶ್‌ದೀಪ್ ಅವರ ಮುಖದಲ್ಲಿದ್ದ ಆ ಸಮಾಧಾನ ಮತ್ತು ಸಂಭ್ರಮದ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದೇ ವೇಳೆ ಈ ಫೋಟೋಗಳನ್ನು ಬಳಸಿಕೊಂಡು ನೆಟ್ಟಿಗರು ಟೀಮ್ ಇಂಡಿಯಾದ ಹಿರಿಯ ವೇಗಿ ಮೊಹಮ್ಮದ್ ಶಮಿ (Mohammed Shami) ಅವರನ್ನು ಸಖತ್ ಟ್ರೋಲ್ ಮಾಡುತ್ತಿದ್ದಾರೆ. ಈ ಹಿಂದೆ ಶಮಿ ಅವರು ಪ್ರೀತಿ ಜಿಂಟಾ ಅವರಿಗೆ ಶುಭಾಶಯ ತಿಳಿಸುವಾಗ ಅಥವಾ ಭೇಟಿಯಾದಾಗ ನಡೆದ ಕೆಲವು ಕ್ಷಣಗಳನ್ನು ನೆನಪಿಸಿಕೊಳ್ಳುತ್ತಿರುವ ಅಭಿಮಾನಿಗಳು, “ಅರ್ಷ್‌ದೀಪ್ ಸಿಂಗ್​​​ಗೆ ಅಪ್ಪುಗೆ ಸಿಕ್ಕಿದೆ, ಆದರೆ ಶಮಿ ಅವರು ಅಂತಹ ಒಂದು ಕ್ಷಣಕ್ಕಾಗಿ ಇನ್ನೂ ಕಾಯುತ್ತಿದ್ದಾರೆ” ಎಂದು ತಮಾಷೆ ಮಾಡುತ್ತಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Akshay Pallamajalu

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More