Choosing CM deferred: ಸಿದ್ದರಾಮಯ್ಯ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಕಂಠೀರವ ಕ್ರೀಡಾಂಗಣದಲ್ಲಿ ನಡೆದಿದ್ದ ಸಿದ್ಧತೆಗಳು ಸ್ಥಗಿತ!
ಸಿದ್ದರಾಮಯ್ಯನವರ ಅಭಿಮಾನಿಗಳು ನಿರಾಶರಾಗಿರುವುದು ಸಿಎಂ ಆಯ್ಕೆ ಮುಂದೂಡಲ್ಪಟ್ಟಿರುವಷ್ಟೇ ಸತ್ಯ.
ಬೆಂಗಳೂರು: ನಾವು ಅಗಲೇ ಹೇಳಿದ್ದೇವೆ, ಕೂಸು ಹುಟ್ಟುವ ಮೊದಲು ಕುಲಾವಿ ಹೊಲಿಯೋದು ಸರಿಯಲ್ಲ ಅಂತ. ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರು ಅಂತ ಹೈಕಮಾಂಡ್ (high command) ತೀರ್ಮಾನ ತೆಗೆದುಕೊಳ್ಳುವ ಮೊದಲೇ ಸಿದ್ದರಾಮಯ್ಯ (Siddaramaiah) ಅವರನ್ನು ಅಯ್ಕೆ ಮಾಡಲಾಗಿದೆ, ನಾಳೆ (ಗುರುವಾರ) ಮಧ್ಯಾಹ್ನ 3.30ಕ್ಕೆ ಅವರು ಕಂಠೀರವ ಕ್ರೀಡಾಂಗಣದಲ್ಲಿ (Kanteerava stadium) ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬ ಸುದ್ದಿ ದೇಶದೆಲ್ಲೆಡೆ ಅದರಲ್ಲೂ ವಿಶೇಷವಾಗಿ ಕರ್ನಾಟಕದಲ್ಲಿ ಕಾಳ್ಗಿಚ್ಚಿನಂತೆ ಹರಡಿತ್ತು. ಆದರ ಪರಿಣಾಮವಾಗೇ ಕ್ರೀಡಾಂಗಣದಲ್ಲಿ ಈ ಪಾಟಿ ತಯಾರಿಗಳು ಶುರುವಾದವು. ಅದರೆ, ಸಿದ್ದತೆಗಳನ್ನು ಸ್ಥಗಿತಗೊಳಿಸಲಾಗಿದೆ. ಮುಖ್ಯಮಂತ್ರಿಯ ಆಯ್ಕೆ ನಾಳೆಯೂ ಆಗುವ ಲಕ್ಷಣಗಳು ಕಾಣುತ್ತಿಲ್ಲ. ಸಿದ್ದರಾಮಯ್ಯನವರ ಅಭಿಮಾನಿಗಳು ನಿರಾಶರಾಗಿರುವುದು ಸಿಎಂ ಆಯ್ಕೆ ಮುಂದೂಡಲ್ಪಟ್ಟಿರುವಷ್ಟೇ ಸತ್ಯ ಮಾರಾಯ್ರೇ!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos