Chikkaballapura: ನಂದಿಗ್ರಾಮ ರಾಸುಗಳ ಜಾತ್ರೆಯಲ್ಲಿ ಮಾರಾಟವಾಗಲಿರುವ ಜೋಡಿ ಹೋರಿಗಳ ಬೆಲೆ ಕೇಳಿದರೆ ನೀವು ದಂಗಾಗುತ್ತೀರಿ!

ಅರುಣ್​ ಕುಮಾರ್​ ಬೆಳ್ಳಿ

Updated on: Feb 18, 2023 | 1:19 PM

ರಾಸುಗಳ ಜಾತ್ರೆಯಲ್ಲೂ ಆಫರ್​ಗಳ ಭರಾಟೆ ಜೋರಾಗಿದೆ. ಎತ್ತುಕೊಂಡವರಿಗೆ ಟಗರು, ಕುರಿ ಇಲ್ಲವೇ ಕೋಳಿಯನ್ನು ಉಚಿತವಾಗಿ ನೀಡಲಾಗುತ್ತಿದೆ!

ಚಿಕ್ಕಬಳ್ಳಾಪುರ: ಜಿಲ್ಲೆಯ ನಂದಿಗ್ರಾಮದಲ್ಲಿ (Nandigram) ಮಹಾಶಿವರಾತ್ರಿ ಸಂದರ್ಭದಲ್ಲಿ ನಡೆಯುವ ರಾಸುಗಳ ಜಾತ್ರೆ (cattle fair) ಬಹಳ ಪೇಮಸ್ಸು ಮಾರಾಯ್ರೇ. ಕೋವಿಡ್-19, ಗಂಟುರೋಗ ಮೊದಲಾದ ಕಾರಣಗಳಿಂದಾಗಿ ಕಳೆದರೆಡು-ಮೂರು ವರ್ಷಗಳಿಂದ ಜಾತ್ರೆ ನಡೆದಿರಲಿಲ್ಲ. ಜಿಲ್ಲಾಡಳಿತ ಈ ವರ್ಷ ಜಾತ್ರೆಗೆ ಅನುಮತಿ ನೀಡಿದ್ದು ಬೇರೆ ಬೇರೆ ಪ್ರದೇಶಗಳಿಂದ ಹಳ್ಳಿಕಾರ್, ಅಮೃತ್ ಮಹಲ್ ಸೇರಿದಂತೆ ಹಲವಾರು ತಳಿಗಳ ದನಕರುಗಳು ಜಾತ್ರೆಗೆ ಕರೆತರಲಾಗಿದೆ. ರಾಸುಗಳ ಬೆಲೆ ಭಾರಿ ದುಬಾರಿ ಅಂತ ಹೇಳಲಾಗುತ್ತಿದ್ದು ಹಳ್ಳಿಕಾರ್ ಮತ್ತು ಅಮೃತ್ ಮಹಲ್ ಎತ್ತುಗಳ ಜೋಡಿ ಸುಮಾರು ರೂ. 8 ಲಕ್ಷಗಳಿಗೆ ಬಿಕರಿಯಾಗುವ ನಿರೀಕ್ಷೆಯಿದೆ ಎನ್ನಲಾಗಿದೆ. ರಾಸುಗಳ ಜಾತ್ರೆಯಲ್ಲೂ ಆಫರ್ ಗಳ (offers) ಭರಾಟೆ ಜೋರಾಗಿದೆ. ಎತ್ತುಕೊಂಡವರಿಗೆ ಟಗರು, ಕುರಿ ಇಲ್ಲವೇ ಕೋಳಿಯನ್ನು ಉಚಿತವಾಗಿ ನೀಡಲಾಗುತ್ತಿದೆ!

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.