ನಿಮ್ಮಲ್ಲಿ Health Insurance ಇದ್ಯಾ, ಹಾಗಿದ್ರೆ ನೀವು ಈ ಸುದ್ದಿ ಓದಲೇಬೇಕು

[lazy-load-videos-and-sticky-control id=”2Fo6tHRIX3s”] ಬೆಂಗಳೂರು: ಕೊರೊನಾ ಕಾಯಿಲೆಯನ್ನ ಮುಂದಿಟ್ಟುಕೊಂಡು ಖಾಸಗಿ ಆಸ್ಪತ್ರೆಗಳು ವಸೂಲಿ ಮಾಡ್ತಿದ್ದಾರೆ ಎಂದು ನಾಗರಭಾವಿ ಮಲ್ಲತಹಳ್ಳಿಯ ವರ್ಧನ್ ಎಂಬವವರಿಂದ ಗೊರಗುಂಟೆ ಪಾಳ್ಯದ ಪೀಪಲ್ ಟ್ರೀ ಆಸ್ಪತ್ರೆ ಮೇಲೆ ಆರೋಪ ಕೇಳೀಬಂದಿದೆ. ಮಲ್ಲತಹಳ್ಳಿಯ ವರ್ಧನ್ ರವರು ತಮ್ಮ 1 ವರ್ಷ 10 ತಿಂಗಳ ಮಗುವಿಗೆ ಜ್ವರ ಅಂತಾ ಪೀಪಲ್ ಟ್ರೀ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ನಂತರ ಮಗ ಹುಷಾರಾಗಿದೆ. ಆದರೆ ವರ್ಧನ್ ರವರ ಬಳಿ ಹೆಲ್ತ್ ಇನ್ಸೂರೆನ್ಸ್ ಇರುವ ಮಾಹಿತಿ ತಿಳಿದ ಆಸ್ಪತ್ರೆ […]

ನಿಮ್ಮಲ್ಲಿ Health Insurance ಇದ್ಯಾ, ಹಾಗಿದ್ರೆ ನೀವು ಈ ಸುದ್ದಿ ಓದಲೇಬೇಕು

Updated on: Jul 20, 2020 | 2:41 PM

[lazy-load-videos-and-sticky-control id=”2Fo6tHRIX3s”]

ಬೆಂಗಳೂರು: ಕೊರೊನಾ ಕಾಯಿಲೆಯನ್ನ ಮುಂದಿಟ್ಟುಕೊಂಡು ಖಾಸಗಿ ಆಸ್ಪತ್ರೆಗಳು ವಸೂಲಿ ಮಾಡ್ತಿದ್ದಾರೆ ಎಂದು ನಾಗರಭಾವಿ ಮಲ್ಲತಹಳ್ಳಿಯ ವರ್ಧನ್ ಎಂಬವವರಿಂದ ಗೊರಗುಂಟೆ ಪಾಳ್ಯದ ಪೀಪಲ್ ಟ್ರೀ ಆಸ್ಪತ್ರೆ ಮೇಲೆ ಆರೋಪ ಕೇಳೀಬಂದಿದೆ.

ಮಲ್ಲತಹಳ್ಳಿಯ ವರ್ಧನ್ ರವರು ತಮ್ಮ 1 ವರ್ಷ 10 ತಿಂಗಳ ಮಗುವಿಗೆ ಜ್ವರ ಅಂತಾ ಪೀಪಲ್ ಟ್ರೀ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ನಂತರ ಮಗ ಹುಷಾರಾಗಿದೆ. ಆದರೆ ವರ್ಧನ್ ರವರ ಬಳಿ ಹೆಲ್ತ್ ಇನ್ಸೂರೆನ್ಸ್ ಇರುವ ಮಾಹಿತಿ ತಿಳಿದ ಆಸ್ಪತ್ರೆ ಸಿಬ್ಬಂದಿ ಮಗು ಗುಣಮುಖನಾಗಿದ್ದರು ಹಣ ಕೀಳುವುದಕ್ಕಾಗಿ ಮಗುವಿಗೆ ಕೋವಿಡ್ ಟೆಸ್ಟ್ ಮಾಡಿ ಪಾಸಿಟಿವ್ ವರದಿ ಬಂದಿದೆ ಅಂತಾ ಹೇಳಿ ಕೇವಲ ಮೂರು ದಿನಕ್ಕೆ 65 ಸಾವಿರ ಬಿಲ್ ಮಾಡಿದ್ದು, ಇನ್ಸೂರೆನ್ಸ್ ನಿಂದ 40 ಸಾವಿರ ಕ್ಲೇಮ್ ಮಾಡಿಕೊಂಡು ನಮ್ಮಿಂದ 25 ಸಾವಿರ ಕಟ್ಟಿಸಿಕೊಂಡಿದ್ದಾರೆ ಎಂದು ವರ್ಧನ್ ಆಸ್ಪತ್ರೆಯ ಮೇಲೆ ಆರೋಪ ಮಾಡಿದ್ದಾರೆ.

ಆಸ್ಪತ್ರೆ ಸಿಬ್ಬಂದಿಯೊಂದಿಗೆ ಜಗಳ ಮಾಡಿ ಮಗುವನ್ನ ಕೆಸಿ ಜನರಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚೆಕ್ ಮಾಡಿಸಿದಾಗ ಕೆಸಿಜಿಯ ವೈದ್ಯರು ಆತನಿಗೆ ಏನೂ ತೊಂದರೆ ಇಲ್ಲ ಅಂತಾ ವರದಿ ನೀಡಿದ್ದಾರೆ. ಆದರೆ ಇಲ್ಲಿ ಖಾಸಗಿ ಆಸ್ಪತ್ರೆಗಳು ಮಾಮೂಲಿ ಜ್ವರಕ್ಕೂ ಕೊರೊನಾವನ್ನ ಥಳುಕು ಹಾಕಿ ವಸೂಲಿ ಮಾಡ್ತಿದ್ದಾರೆ, ಹೀಗಾಗಿ ದಯವಿಟ್ಟು ಇಂಥಹದ್ದನ್ನ ತಡೆಗಟ್ಟಬೇಕು, ಪೋಷಕರು ಕೂಡ ಎಚ್ಚರವಹಿಸಬೇಕು ಅಂತಾ ಮಗುವಿನ ತಂದೆ ಅದಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.

Published On - 12:37 pm, Mon, 20 July 20