‘ಉಗ್ರಾವತಾರ’ದಲ್ಲಿ ಸಿದ್ದಿ ಹಾಡುಗಾರರಿಂದ ವಿಶೇಷ ಹಾಡು; ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು?
Ugravatara Movie: ‘ಉಗ್ರಾವತಾರ’ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಈ ಚಿತ್ರಕ್ಕೆ ವಿಶೇಷ ಹಾಡೊಂದನ್ನು ಪ್ಲಾನ್ ಮಾಡಲಾಗಿದೆ. ಈ ಕುರಿತು ನಟಿ ಪ್ರಿಯಾಂಕಾ ಉಪೇಂದ್ರ ಮಾತನಾಡಿದ್ದಾರೆ.
ಸಿದ್ದಿ ಹಾಡುಗಾರರ ಜತೆ ಪ್ರಿಯಾಂಕಾ ಉಪೇಂದ್ರ ‘ಉಗ್ರಾವತಾರ’ ಚಿತ್ರದಲ್ಲಿ ಹೆಜ್ಜೆ ಹಾಕಲಿದ್ದಾರೆ. ಈ ಕುರಿತು ಟಿವಿ9 ಜತೆ ಮಾತನಾಡಿರುವ ಅವರು, ನಮ್ಮ ನಿರ್ದೇಶಕರಿಗೆ ‘ಸಲಗ’ ಚಿತ್ರದ ಹಾಡು ಇಷ್ಟವಾಗಿತ್ತು. ನಮ್ಮ ಚಿತ್ರಕ್ಕೂ ಅಂತಹ ಹಾಡು ಬೇಕಾಗಿತ್ತು. ‘ಉಗ್ರಾವತಾರ’ದಲ್ಲಿ ನನ್ನ ಪಾತ್ರದ ಹೆಸರು ಶ್ರೀ ದುರ್ಗಿ ಎಂದು. ಆ ಹಿನ್ನೆಲೆಯಲ್ಲಿ ಹಾಡು ರಚಿಸಲಾಗಿದೆ. ಆ ಹಾಡಿನ ಚಿತ್ರೀಕರಣದಲ್ಲಿ ಹೆಜ್ಜೆ ಹಾಕಲಿದ್ದು, ಆ ದಿನಕ್ಕೆ ಬಹಳ ಕಾತರದಿಂದ ಕಾಯುತ್ತಿದ್ದೇನೆ ಎಂದಿದ್ದಾರೆ ಪ್ರಿಯಾಂಕಾ.
ಪ್ರಮೋಷನಲ್ ಹಾಡನ್ನು ಗಿರಿಜಾ ಸಿದ್ದಿ ಅವರೇ ಬರೆದಿದ್ದು, ರಾಧಾಕೃಷ್ಣ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದಾರೆ. ಕೊಂಕಣಿ, ಉರ್ದು ಹಾಗೂ ಕನ್ನಡ ಸಾಹಿತ್ಯವನ್ನು ಈ ಹಾಡು ಹೊಂದಿದೆ. ಚಿತ್ರಕ್ಕೆ ಗುರುಮೂರ್ತಿ ನಿರ್ದೇಶನ ಮಾಡಿದ್ದು, ತಾರಾಗಣದಲ್ಲಿ ಸುಮನ್, ಪವಿತ್ರಾ ಲೋಕೇಶ್, ಶೋಭ, ನಟರಾಜ್ ಮೊದಲಾದವರು ಕಾಣಿಸಿಕೊಂದಿದ್ದಾರೆ. ನಂದಕುಮಾರ್ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದು, ಕಿನ್ನಾಳ್‌ರಾಜ್ ಸಾಹಿತ್ಯ ಮತ್ತು ಸಂಭಾಷಣೆ, ವಿನೋಧ್-ಮಾಸ್ ಮಾದ- ಅಶೋಕ್ ಸಾಹಸ, ವೆಂಕಿ.ಯುಡಿವಿ ಸಂಕಲನ ಚಿತ್ರಕ್ಕಿದೆ. ಸಿನಿಮಾದ ಬಹುತೇಕ ಶೂಟಿಂಗ್ ಪೂರ್ಣಗೊಂಡಿದ್ದು, ಇನ್ನೆರಡು ತಿಂಗಳಲ್ಲಿ ಸಿನಿಮಾ ರಿಲೀಸ್ ಮಾಡೋ ಪ್ಲಾನ್ನಲ್ಲಿದೆ ಚಿತ್ರತಂಡ.
ವಿಶೇಷ ಹಾಡಿನ ತುಣುಕು ಇಲ್ಲಿದೆ:
ಇದನ್ನೂ ಓದಿ:
ಪ್ರಿಯಾಂಕಾ ಉಪೇಂದ್ರ ‘ಉಗ್ರಾವತಾರ’ಕ್ಕೆ ಗಿರಿಜಾ ಸಿದ್ದಿ ಸಾತ್; ಬರುತ್ತಿದೆ ಮತ್ತೊಂದು ಕೊಂಕಣಿ ಸಾಂಗ್