ಊಟಿಯಲ್ಲಿ ದೆವ್ವದ ಅನುಭವ ಆಗಿದೆ: ಪ್ರಿಯಾಂಕಾ ಉಪೇಂದ್ರ ಮಾತು ಕೇಳಿ ಸೃಜನ್ ಶಾಕ್

Updated on: May 04, 2025 | 9:03 AM

‘ಮಜಾ ಟಾಕೀಸ್’ ಕಾರ್ಯಕ್ರಮಕ್ಕೆ ನಟಿ ಪ್ರಿಯಾಂಕಾ ಉಪೇಂದ್ರ ಅವರು ಬಂದಿದ್ದಾರೆ. ಈ ವೇಳೆ ಅವರಿಗೆ ‘ನೀವೇನಾದರೂ ದೆವ್ವ ನೋಡಿದ್ದೀರಾ’ ಅಂತ ಸೃಜನ್ ಲೋಕೇಶ್ ಕೇಳಿದರು. ‘ನಿಮಗೂ ಈ ದೆವ್ವದ ಪಿಕ್ಚರ್​ಗೂ ಏನು ಸಂಬಂಧ? ರಿಯಲ್ ಆಗಿ ದೆವ್ವ ನೋಡಿದ್ದೀರಾ’ ಎಂದು ಕೇಳಿದ್ದಕ್ಕೆ ಪ್ರಿಯಾಂಕಾ ಅವರು ಹೀಗೆ ಉತ್ತರಿಸಿದರು. ವಿಡಿಯೋ ಇಲ್ಲಿದೆ ನೋಡಿ..

ನಟಿ ಪ್ರಿಯಾಂಕಾ ಉಪೇಂದ್ರ ಅವರು ‘ಮಜಾ ಟಾಕೀಸ್’ (Maja Talkies) ಕಾರ್ಯಕ್ರಮಕ್ಕೆ ಬಂದಿದ್ದಾರೆ. ಈ ವೇಳೆ ಅವರಿಗೆ ದೆವ್ವ ನೋಡಿದ್ದೀರಾ ಎಂದು ಸೃಜನ್ ಲೋಕೇಶ್ ಪ್ರಶ್ನೆ ಕೇಳಿದರು. ‘ನಿಮಗೂ ಈ ದೆವ್ವದ ಪಿಕ್ಚರ್​ಗೂ ಏನು ಸಂಬಂಧ? ನಿಜ ಜೀವನದಲ್ಲಿ ದೆವ್ವ ನೋಡಿದ್ದೀರಾ’ ಎಂದು ಕೇಳಿದ್ದಕ್ಕೆ ಪ್ರಿಯಾಂಕಾ ಉಪೇಂದ್ರ (Priyanka Upendra) ಈ ರೀತಿ ಉತ್ತರಿಸಿದರು. ‘ನಾನು ದೆವ್ವ ನೋಡಿಲ್ಲ. ಆದರೆ ಅನುಭವಿಸಿದ್ದೀನಿ. ಊಟಿಯಲ್ಲಿ ಒಮ್ಮೆ ಆ ರೀತಿ ಆಗಿತ್ತು. ನೆರಳಿನ ಆಕೃತಿ ಥರ’ ಎಂದು ಪ್ರಿಯಾಂಕಾ ಹೇಳಿದರು. ನಂತರ ಅವರು ಹೇಳಿದ ಮಾತು ತುಂಬ ತಮಾಷೆಯಾಗಿತ್ತು. ‘ಆಮೇಲೆ ನಿಮ್ಮ ಮನೆಯಲ್ಲಿ ನೀವು ಒಮ್ಮೊಮ್ಮೆ ಮೇಕಪ್ ಇಲ್ಲದೇ ಬಂದು ಬಿಡುತ್ತೀರಿ’ ಎಂದು ಪ್ರಿಯಾಂಕಾ ಹೇಳಿದ್ದು ಕೇಳಿ ಸೃಜನ್ ಲೋಕೇಶ್ (Srujan Lokesh) ಅಚ್ಚರಿಯಿಂದ ನೋಡಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More