Karnataka Assembly Polls: ಬಿಎಸ್ ಯಡಿಯೂರಪ್ಪ ಕುಟುಂಬದೊಂದಿಗೆ ಕಟ್ಟಿಕೊಂಡ ವೈಮನಸ್ಸು ವಿ ಸೋಮಣ್ಣಗೆ ಮುಳುವಾಯಿತೇ?

ಅರುಣ್​ ಕುಮಾರ್​ ಬೆಳ್ಳಿ

Updated on: Apr 12, 2023 | 10:18 AM

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಮತ್ತು ಹೈಕಮಾಂಡ್ ಜೊತೆ ಮಾತಾಡಿ ಗೋವಿಂದರಾಜನಗರದ ಟಿಕೆಟ್ ಅನ್ನು ತಮ್ಮ ಮಗ ಅರುಣ್ ಸೋಮಣ್ಣಗೆ ನೀಡುವಂತೆ ಒತ್ತಾಯಿಸುವುದಾಗಿ ಹೇಳುತ್ತಾರೆ.

ಬೆಂಗಳೂರು: ಸಚಿವ ವಿ ಸೋಮಣ್ಣ (V Somanna) ನಿಸ್ಸಂದೇಹವಾಗಿ ಆಘಾತಕ್ಕೊಳಗಾಗಿದ್ದಾರೆ. ಪಕ್ಷದ ಕಾರ್ಯಕರ್ತರು ಮತ್ತು ಅವರ ಕುಟುಂಬವರು ಕೂಡ ವರಿಷ್ಠರ ತೀರ್ಮಾನದಿಂದ ಕಂಗಾಲಾಗಿದ್ದಾರೆ. ಸೋಮಣ್ಣಗೆ ವರುಣಾ ಹಾಗೂ ಚಾಮರಾಜನಗರದಿಂದ ಟಿಕೆಟ್ ನೀಡಿ ಹೈಕಮಾಂಡ್ ಏನು ಸಾಬೀತು ಮಾಡಲು ನಿರ್ಧರಿಸಿದೆಯೋ? ಸೋಮಣ್ಣ ಬಿಜೆಪಿಗೆ ಬೇಡದ ಕೂಸು ಆಗಿಬಿಟ್ಟರೆ? ಸೋಮಣ್ಣ ಅವರ ಮಾತಿನಲ್ಲಿ ಬೇಸರ ಮತ್ತು ಅಸಮಾಧಾನವನ್ನು ಸ್ಪಷ್ಟವಾಗಿ ಗುರುತಿಸಬಹುದು. ಬಿಎಸ್ ಯಡಿಯೂರಪ್ಪ (BS Yediyurappa) ಕುಟುಂಬದೊಂದಿಗೆ ಕಟ್ಟಿಕೊಂಡ ವೈರತ್ವ ಸೋಮಣ್ಣಗೆ ದುಬಾರಿಯಾಗಿ ಪರಿಣಮಿಸಿದೆ ಅನ್ನದೆ ವಿಧಿಯಿಲ್ಲ. ಅಷ್ಟಾಗಿಯೂ ಸೋಮಣ್ಣ ವರಿಷ್ಠರ ತೀರ್ಮಾನವನ್ನು ಸ್ಪೋರ್ಟ್ ಆಗಿ ಸ್ವೀಕರಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಮತ್ತು ಹೈಕಮಾಂಡ್ ಜೊತೆ ಮಾತಾಡಿ ಗೋವಿಂದರಾಜನಗರದ ಟಿಕೆಟ್ ಅನ್ನು ತಮ್ಮ ಮಗ ಅರುಣ್ ಸೋಮಣ್ಣಗೆ ನೀಡುವಂತೆ ಒತ್ತಾಯಿಸುವುದಾಗಿ ಹೇಳುತ್ತಾರೆ

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.