Loading video

ಶಿವರಾಜ್ ಕುಮಾರ್, ರವಿಚಂದ್ರನ್ ಭೇಟಿಗೆ ತಯಾರಾದ ಎಂಎನ್ ಕುಮಾರ್: ಮುಂದೇನು?

|

Updated on: Jul 18, 2023 | 11:50 PM

MN Kumar: ಸುದೀಪ್ ತಮ್ಮ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಬೆನ್ನಲ್ಲೆ ಫಿಲಂ ಚೇಂಬರ್ ಮುಂದೆ ಧರಣಿ ಕೂತಿದ್ದ ನಿರ್ಮಾಪಕ ಎಂಎನ್ ಕುಮಾರ್, ಇದೀಗ ಶಿವರಾಜ್ ಕುಮಾರ್ ಹಾಗೂ ರವಿಚಂದ್ರನ್ ಅವರನ್ನು ಭೇಟಿಯಾಗಲು ಮುಂದಾಗಿದ್ದಾರೆ.

ಸುದೀಪ್ (Sudeep)​ ವಿರುದ್ಧ ಅಡ್ವಾನ್ಸ್ ಮರಳಿಸಿಲ್ಲ ಎಂಬುದು ಸೇರಿದಂತೆ ಸರಣಿ ಆರೋಪ ಮಾಡಿದ್ದ ನಿರ್ಮಾಪಕ ಎಂಎನ್ ಕುಮಾರ್, ಸುದೀಪ್ ಅವರು 10 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ ಬೆನ್ನಲ್ಲೆ ವರಸೆ ಬದಲಿಸಿದ್ದು, ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಲು ಮುಂದಾಗಿದ್ದಾರೆ. ಶಿವರಾಜ್ ಕುಮಾರ್ ಹಾಗೂ ರವಿಚಂದ್ರನ್ ಅವರು ಮಧ್ಯಸ್ಥಿಕೆ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ. ತಾವು ಖುದ್ದಾಗಿ ರವಿಚಂದ್ರನ್ ಹಾಗೂ ಶಿವರಾಜ್ ಕುಮಾರ್ ಅವರನ್ನು ಭೇಟಿ ಆಗಲು ಮುಂದಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ