Opposition Leaders Meet: ಸೀಟು ಹುಡುಕಾಡುತ್ತಿದ್ದ ಸಿದ್ದರಾಮಯ್ಯರಿಗೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ತಮ್ಮದನ್ನು ಕೊಡಲು ಮುಂದಾದರು!
ಆದರೆ, ಸಿದ್ದರಾಮಯ್ಯ ಹೇಮಂತ್ ಭುಜ ತಟ್ಟಿ ಕೂತ್ಕೊಳ್ಳಿ ಅಂತ ಹೇಳಿ ಅವರ ಪಕ್ಕದ ಸೀಟಲ್ಲಿ ಆಸೀನರಾಗುತ್ತಾರೆ.
ಬೆಂಗಳೂರು: ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿರಲಿ, ವಿರೋಧ ಪಕ್ಷದ ನಾಯಕನಾಗಿರಲಿ ಅಥವಾ ಕೇವಲ ಒಬ್ಬ ಶಾಸಕನಾಗಿರಲಿ, ನೀರು ತನ್ನ ಮಟ್ಟವನ್ನು ಕಾಯ್ದುಕೊಳ್ಳುವ ಹಾಗೆ ತಮ್ಮ ಗತ್ತನ್ನು ಕಾಯ್ದುಕೊಳ್ಳುತ್ತಾರೆ. 26 ವಿರೋಧ ಪಕ್ಷಗಳ ನಾಯಕರು ಇಂದು ಬೆಂಗಳೂರಲ್ಲಿ ನಡೆಸಿದ ಸಭೆಯ ವೇದಿಕೆಗೆ ಅವರು ತಮ್ಮ ಎಂದಿನ ಗತ್ತಿನಲ್ಲೇ ಆಗಮಿಸಿದರು. ಆದರೆ ಕೂರಲು ಅವರಿಗೆ ತಕ್ಷಣಕ್ಕೆ ಆಸನ ಸಿಗೋದಿಲ್ಲ. ಅಯೋಜಕರು ಮೊದಲ ಸಾಲಿನ ಕೊನೆಯಲ್ಲಿ ಸೀಟು ಇರುವುದನ್ನು ತೋರಿಸಿದಾಗ ಮುಖ್ಯಮಂತ್ರಿ ನಿಧಾನಕ್ಕೆ ನಡೆಯುತ್ತಾ ಅಲ್ಲಿಗೆ ಹೋಗುತ್ತಾರೆ. ವೇದಿಕೆ ಮೇಲಿದ್ದ ಇತರ ನಾಯಕರು ತಮ್ಮ ತಮ್ಮ ಮಾತುಗಳಲ್ಲಿ ಬ್ಯೂಸಿಯಾಗಿರುತ್ತಾರೆ. ಆದರೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್, ಸಿದ್ದರಾಮಯ್ಯರನ್ನು ಕಂಡಾಕ್ಷಣ ಎದ್ದು ನಿಂತು ತಮ್ಮ ಸೀಟು ಬಿಟ್ಟುಕೊಡಲು ಮುಂದಾಗುತ್ತಾರೆ. ಆದರೆ, ಸಿದ್ದರಾಮಯ್ಯ ಹೇಮಂತ್ ಭುಜ ತಟ್ಟಿ ಕೂತ್ಕೊಳ್ಳಿ ಅಂತ ಹೇಳಿ ಅವರ ಪಕ್ಕದ ಸೀಟಲ್ಲಿ ಆಸೀನರಾಗುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಪ್ಲೇಆಫ್ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ

