VIDEO: ಪಾಕಿಸ್ತಾನ್ ಸೂಪರ್ ಲೀಗ್​ನ ‘ಕಳ್ಳಾಟ’ ಬಯಲು

Updated on: Mar 30, 2026 | 12:54 PM

PSL 2026 Ball Tampering: ಪಾಕಿಸ್ತಾನ್ ಸೂಪರ್ ಲೀಗ್​ನ 6ನೇ ಪಂದ್ಯವು ವಿವಾದಕ್ಕೀಡಾಗಿದೆ. ಈ ವಿವಾದಕ್ಕೆ ಕಾರಣ ಪಂದ್ಯದ ವೇಳೆ ಕಂಡು ಬಂದ ಕಳ್ಳಾಟ. ಅಂದರೆ ಮ್ಯಾಚ್​ನ ಅಂತಿಮ ಓವರ್​ಗೂ ಮುನ್ನ ಪಾಕಿಸ್ತಾನದ ಸ್ಟಾರ್ ಆಟಗಾರರಾದ ಫಖರ್ ಝಮಾನ್, ಶಾಹೀನ್ ಅಫ್ರಿದಿ ಹಾಗೂ ಹಾರಿಸ್ ರೌಫ್ ಜೊತೆಗೂಡಿ ಬಾಲ್ ಟ್ಯಾಂಪರಿಂಗ್ ಮಾಡಿದ್ದಾರೆ. 

PSL 2026: ಪಾಕಿಸ್ತಾನ್ ಸೂಪರ್ ಲೀಗ್​ನ 6ನೇ ಪಂದ್ಯವು ವಿವಾದಕ್ಕೀಡಾಗಿದೆ. ಈ ವಿವಾದಕ್ಕೆ ಕಾರಣ ಪಂದ್ಯದ ವೇಳೆ ಕಂಡು ಬಂದ ಕಳ್ಳಾಟ. ಅಂದರೆ ಮ್ಯಾಚ್​ನ ಅಂತಿಮ ಓವರ್​ಗೂ ಮುನ್ನ ಪಾಕಿಸ್ತಾನದ ಸ್ಟಾರ್ ಆಟಗಾರರಾದ ಫಖರ್ ಝಮಾನ್, ಶಾಹೀನ್ ಅಫ್ರಿದಿ ಹಾಗೂ ಹಾರಿಸ್ ರೌಫ್ ಜೊತೆಗೂಡಿ ಬಾಲ್ ಟ್ಯಾಂಪರಿಂಗ್ ಮಾಡಿದ್ದಾರೆ.

ಪಂದ್ಯದ ಅಂತಿಮ ಓವರ್‌ನಲ್ಲಿ ಕರಾಚಿ ಕಿಂಗ್ಸ್ ಗೆಲುವಿಗೆ 14 ರನ್ ಬೇಕಿತ್ತು. ಆ ಸಮಯದಲ್ಲಿ ಲಾಹೋರ್​ ಖಲಂದರ್ಸ್​ ತಂಡದ ಆಟಗಾರ ಫಖರ್ ಝಮಾನ್ ಅವರು ಚೆಂಡಿನ ಮೇಲ್ಮೈಯನ್ನು ಉದ್ದೇಶಪೂರ್ವಕವಾಗಿ ಉಗುರಿನಿಂದ ಕೆರೆಯುತ್ತಿರುವುದು  ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಇದನ್ನು ಗಮನಿಸಿದ ಅಂಪೈರ್ ಫೈಸಲ್ ಅಫ್ರಿದಿ ತಕ್ಷಣವೇ ಕ್ರಮ ಕೈಗೊಂಡರು. ಅಲ್ಲದೆ ಅಂತಿಮ ಓವರ್​ಗೂ ಮುನ್ನ ಚೆಂಡನ್ನು ಬದಲಿಸಿ ಲಾಹೋರ್ ಖಲಂದರ್ಸ್ ತಂಡಕ್ಕೆ  5 ರನ್​ಗಳ ದಂಡ ವಿಧಿಸಿದ್ದಾರೆ. ಇದರಿಂದ ಕರಾಚಿ ಕಿಂಗ್ಸ್​ ತಂಡದ ಗುರಿ 14 ರಿಂದ 9 ರನ್‌ಗಳಿಗೆ ಇಳಿಕೆಯಾಯಿತು.

ಇನ್ನು ಚೆಂಡು ವಿರೂಪಗೊಳಿಸಿದ ಫಖರ್ ಝಮಾನ್ ವಿರುದ್ಧ ಲೆವೆಲ್ 3 ಅಪರಾಧದ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಒಂದು ವೇಳೆ ತಪ್ಪಿತಸ್ಥರೆಂದು ಸಾಬೀತಾದರೆ, ಫಖರ್ ಅವರನ್ನು ಕನಿಷ್ಠ ಒಂದು ಪಂದ್ಯದಿಂದ ಬ್ಯಾನ್ ಮಾಡಲಾಗುತ್ತದೆ. ಅಲ್ಲದೆ, ನಾಯಕ ಶಾಹೀನ್ ಅಫ್ರಿದಿ ಮೇಲೂ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.

ಒಟ್ಟಿನಲ್ಲಿ ಪಾಕ್ ಆಟಗಾರರ ಮೋಸದಾಟದಿಂದಾಗಿ ಇದೀಗ ಪಾಕಿಸ್ತಾನ್ ಸೂಪರ್ ಲೀಗ್​ ಮೇಲೆ ಕಳ್ಳಾಟದ ಕಾರ್ಮೋಡ ಕವಿದಿದ್ದು, ಟೂರ್ನಿಯ ವಿರುದ್ಧ ಪಾಕಿಸ್ತಾನ್ ಕ್ರಿಕೆಟ್ ಪ್ರೇಮಿಗಳಿಂದಲೇ ಭಾರೀ ಆಕ್ರೋಶಗಳು ವ್ಯಕ್ತವಾಗುತ್ತಿದೆ.

 

Follow Us