ಕಾಮಗಾರಿ ವೀಕ್ಷಣೆಗೆ ಬಂದಿದ್ದ ವಿಠ್ಠಲ್ ಹಲಗೇಕರ್ಗೆ ಜನರಿಂದ ಕ್ಲಾಸ್: ಕಕ್ಕಾಬಿಕ್ಕಿಯಾದ ಬಿಜೆಪಿ ಶಾಸಕ
ಮುಖ್ಯಾಂಶಗಳು
- ಬಿಜೆಪಿ ಶಾಸಕ ವಿಠ್ಠಲ್ ಹಲಗೇಕರ್ಗೆ ಇಟಗಿ ಗ್ರಾಮಸ್ಥರ ತರಾಟೆ
- ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಇಟಗಿ ಗ್ರಾಮಸ್ಥರ ತರಾಟೆ
- ಜನರು ಸಮಸ್ಯೆಯಲ್ಲಿದ್ದಾಗ ಬರದ ನೀವು ಈಗ್ಯಾಕೆ ಬಂದಿದ್ದೀರಿ?
ಬೆಳಗಾವಿಯಲ್ಲಿ ಕಾಮಗಾರಿ ವೀಕ್ಷಣೆಗೆ ಬಂದಿದ್ದ ಬಿಜೆಪಿ ಶಾಸಕ ವಿಠ್ಠಲ್ ಹಲಗೇಕರ್ ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ರಸ್ತೆ ಸಮಸ್ಯೆಗಾಗಿ ಪ್ರತಿಭಟನೆ ನಡೆಸುತ್ತಿದ್ದಾಗ ಬಾರದ ಶಾಸಕರು ಈಗ ಏಕೆ ಬಂದರು ಎಂದು ಪ್ರಶ್ನಿಸಿದರು. ಗ್ರಾಮಸ್ಥರ ಪ್ರಶ್ನೆಗೆ ಉತ್ತರಿಸಲಾಗದೆ ಶಾಸಕರು ಕಕ್ಕಾಬಿಕ್ಕಿಯಾದರು. ಗ್ರಾಮಸ್ಥರು ಶಾಸಕರ ಕಾರು ತಡೆದು ಧಿಕ್ಕಾರ ಕೂಗಿದರು.
ಬೆಳಗಾವಿ, ಅಕ್ಟೋಬರ್ 25: ‘ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾಗ ನೀವು ಬರಲಿಲ್ಲ, ಈಗ ಕಾಮಗಾರಿ ವೀಕ್ಷಣೆಗೆ ಬಂದಿದ್ದೀರಿ. ಜನರು ಸಮಸ್ಯೆಯಲ್ಲಿದ್ದಾಗ ಬರದ ನೀವು ಈಗ್ಯಾಕೆ ಬಂದಿದ್ದೀರಿ’ ಎಂದು ಬಿಜೆಪಿ ಶಾಸಕ ವಿಠ್ಠಲ್ ಹಲಗೇಕರ್ಗೆ ಗ್ರಾಮಸ್ಥರು ತರಾಟೆ ತೆಗೆದುಕೊಂಡು ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಇಟಗಿಯಲ್ಲಿ ನಡೆದಿದೆ. ಶಾಸಕ ವಿಠ್ಠಲ್ ಹಲಗೇಕರ್ ಕಾಮಗಾರಿ ವೀಕ್ಷಣೆಗೆ ಬಂದಿದ್ದರು. ಈ ವೇಳೆ ಅವರ ಕಾರು ತಡೆದಿದ್ದಾರೆ. ಸುಳ್ಳು ಭರವಸೆ ನೀಡುವ ಶಾಸಕರಿಗೆ ಧಿಕ್ಕಾರ ಎಂದು ಘೋಷಣೆ ಕೂಗಿದ್ದಾರೆ. ಶಾಸಕರ ಬೆಂಬಲಿಗರು ಮತ್ತು ಇಟಗಿ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ಉಂಟಾಗಿದೆ. ಜನಾಕ್ರೋಶಕ್ಕೆ ಬೆದರಿದ ಶಾಸಕರು ಟವೆಲ್ನಿಂದ ಬೆವರು ಒರೆಸಿಕೊಂಡಿದ್ದಾರೆ. ಬಳಿಕ ಗ್ರಾಮಸ್ಥರ ಮನವೊಲಿಸಿ ಸ್ಥಳದಿಂದ ತೆರಳಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
