ಪುನೀತ್​ ಅಂತ್ಯಕ್ರಿಯೆ ಮರುದಿನ ಹೇಗಿದೆ ಶಿವಣ್ಣನ ದಿನಚರಿ? ನೋವು ನುಂಗಿಕೊಂಡು ಮುಂದಿನ ಹೆಜ್ಜೆ ಇಟ್ಟ ಶಿವರಾಜ್​ಕುಮಾರ್​

| Updated By: ಮದನ್​ ಕುಮಾರ್​

Updated on: Nov 01, 2021 | 12:53 PM

Shivarajkumar: ನಟ ಶಿವರಾಜ್​ಕುಮಾರ್​ ಅವರು ಸೋಮವಾರ (ನ.1) ಮುಂಜಾನೆ ಎಂದಿನಂತೆ ವಾಕಿಂಗ್​ಗೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ಅವರ ಜೊತೆ ಒಂದಷ್ಟು ಗೆಳೆಯರು ಸಾಥ್​ ನೀಡಿದ್ದಾರೆ.

ಪುನೀತ್​ ರಾಜ್​ಕುಮಾರ್​ ಅವರ ನಿಧನದಿಂದಾಗಿ ಶಿವರಾಜ್​ಕುಮಾರ್​ ಅವರು ಕುಗ್ಗಿ ಹೋಗಿದ್ದಾರೆ. ರಾಜ್​ ಫ್ಯಾಮಿಲಿಯ ಹಿರಿಯಣ್ಣನಾಗಿರುವ ಅವರು ಎಲ್ಲ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದಾರೆ. ಅಪ್ಪು ಮೇಲೆ ಶಿವಣ್ಣ ಅಪಾರ ಪ್ರೀತಿ, ಅಭಿಮಾನ ಇಟ್ಟುಕೊಂಡಿದ್ದರು. ಈಗ ಪುನೀತ್​ ಇಲ್ಲ ಎಂಬ ನೋವನ್ನು ನುಂಗಿಕೊಂಡು ನಾವೆಲ್ಲ ಮುಂದೆ ಸಾಗಬೇಕು ಎಂದು ಅವರು ಅಂತ್ಯಕ್ರಿಯೆ ಮುಗಿದ ಬಳಿಕ ಹೇಳಿದ್ದರು. ಅದರಂತೆಯೇ ಈಗ ಅವರ ಹೊಸ ದಿನ ಆರಂಭ ಆಗಿದೆ.

ಕಂಠೀರವ ಸ್ಟುಡಿಯೋ ಆವರಣದಲ್ಲಿ ಭಾನುವಾರ (ಅ.31) ಪುನೀತ್​ ರಾಜ್​ಕುಮಾರ್​ ಅವರ ಅಂತ್ಯ ಸಂಸ್ಕಾರ ಮಾಡಲಾಯಿತು. ಸೋಮವಾರ (ನ.1) ಮುಂಜಾನೆ ಶಿವಣ್ಣ ಅವರು ನಾಗವಾರದ ಮನೆಯಿಂದ ಎಂದಿನಂತೆ ವಾಕಿಂಗ್​ಗೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ಅವರ ಜೊತೆ ಒಂದಷ್ಟು ಗೆಳೆಯರು ಕೂಡ ಸಾಥ್​ ನೀಡಿದ್ದಾರೆ. ಆ ವಿಡಿಯೋ ಕೂಡ ಲಭ್ಯವಾಗಿದೆ. ಅನೇಕ ಸಿನಿಮಾಗಳು ‘ಹ್ಯಾಟ್ರಿಕ್​ ಹೀರೋ’ ಕೈಯಲ್ಲಿವೆ. ಅವುಗಳ ಕೆಲಸಗಳಲ್ಲಿ ಅವರು ಮತ್ತೆ ತೊಡಗಿಕೊಳ್ಳಲು ಒಂದಷ್ಟು ದಿನ ಸಮಯ ಹಿಡಿಯಬಹುದು.

ಇದನ್ನೂ ಓದಿ:

Puneeth Rajkumar: ಅಶ್ಲೀಲ ಪದಗಳಿಂದ ಪುನೀತ್​ಗೆ ಅವಮಾನ; ಜನರಿಗೆ ಮನುಷ್ಯತ್ವ ಇಲ್ವಾ? ಸುದೀಪ್​ ಪುತ್ರಿ ಸಾನ್ವಿ ಗರಂ

ಕನ್ನಡಾಂಬೆ ಮಡಿಲಲ್ಲಿ, ಅಪ್ಪಾಜಿ ತೋಳಲ್ಲಿ ಪುನೀತ್​; ಮನ ಕಲಕುತ್ತಿವೆ ಅಪ್ಪು​ ರೇಖಾಚಿತ್ರಗಳು

Published on: Nov 01, 2021 12:48 PM