Puneeth Rajkumar: ಪುನೀತ್ ರಾಜ್ಕುಮಾರ್ ಇಲ್ಲದೇ ಕಳೆಯಿತು 11 ತಿಂಗಳು; ಸಮಾಧಿ ಬಳಿ ಕಣ್ಣೀರು ಹಾಕಿದ ಫ್ಯಾನ್ಸ್
Puneeth Rajkumar Samadhi: ದೂರದ ಊರುಗಳಿಂದ ಬಂದ ಅಭಿಮಾನಿಗಳು ಪುನೀತ್ ಸಮಾಧಿಗೆ ನಮಿಸಿದ್ದಾರೆ. ನೆಚ್ಚಿನ ನಟನ ನೆನಪಿನಲ್ಲಿ ಫ್ಯಾನ್ಸ್ ಕಣ್ಣೀರು ಹಾಕಿದ್ದಾರೆ.
ಕಳೆದ ವರ್ಷ ಅಕ್ಟೋಬರ್ 29ರಂದು ಪುನೀತ್ ರಾಜ್ಕುಮಾರ್ (Puneeth Rajkumar) ಅವರು ಹೃದಯಾಘಾತದಿಂದ ನಿಧನರಾಗಿದ್ದು ತೀವ್ರ ನೋವಿನ ಸಂಗತಿ. ಅವರು ಇಲ್ಲ ಎಂಬ ಶೋಕ ಎಂದಿಗೂ ಕೊನೆಯಾಗುವಂಥದ್ದಲ್ಲ. ಅಪ್ಪು ನಿಧನರಾಗಿ ಇಂದಿಗೆ 11 ತಿಂಗಳು ಕಳೆದಿದೆ. ಡಾ. ರಾಜ್ಕುಮಾರ್ ಕುಟುಂಬದವರು ಪುನೀತ್ ಸಮಾಧಿಗೆ (Puneeth Rajkumar Samadhi) ವಿಶೇಷವಾಗಿ ಹೂವಿನ ಅಲಂಕಾರ ಮಾಡಿ, ಬಗೆಬಗೆಯ ತಿನಿಸುಗಳ ನೈವೇದ್ಯ ಅರ್ಪಿಸಿದ್ದಾರೆ. ದೂರದೂರದ ಊರುಗಳಿಂದ ಬಂದ ಅಭಿಮಾನಿಗಳು ‘ಪವರ್ ಸ್ಟಾರ್’ ನೆನಪಿನಲ್ಲಿ ಕಣ್ಣೀರು ಹಾಕಿದ್ದಾರೆ. ಅಪ್ಪು ಇಲ್ಲ ಎಂಬುದನ್ನು ಒಪ್ಪಿಕೊಳ್ಳಲು ಅಭಿಮಾನಿಗಳಿಗೆ (Puneeth Rajkumar Fans) ಸಾಧ್ಯವಾಗುತ್ತಿಲ್ಲ.
Loading...
Unable to load recommendations.
Follow Us
