ನಟಿ ರಚಿತಾ ರಾಮ್ (Rachita Ram) ಅವರು ಕನ್ನಡ ಚಿತ್ರರಂಗದಲ್ಲಿ ಸಖತ್ ಬ್ಯುಸಿ ಆಗಿದ್ದಾರೆ. ಅವರಿಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಈಗ ಅವರು ಡಾಲಿ ಧನಂಜಯ್ ಜೊತೆ ನಟಿಸಿರುವ ‘ಮಾನ್ಸೂನ್ ರಾಗ’ (Monsoon Raga) ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಒಂದು ಘಟನೆಯನ್ನು ಡಾಲಿ ಮತ್ತು ರಚಿತಾ ನೆನಪು ಮಾಡಿಕೊಂಡರು. ಧನಂಜಯ್ (Daali Dhananjay) ಅವರ ಅಣ್ಣನ ಮಗಳಿಗೆ ರಚಿತಾ ಎಂದು ಹೆಸರು ಇಡಲಾಗಿದೆ. ಈ ಹಿಂದೆ ‘ಬಡವ ರಾಸ್ಕಲ್’ ಚಿತ್ರದ ಪ್ರೀ-ರಿಲೀಸ್ ಇವೆಂಟ್ ವೇಳೆ ಆ ಬಾಲಕಿಯನ್ನು ಭೇಟಿಯಾಗಿದ್ದರ ಬಗ್ಗೆ ರಚಿತಾ ರಾಮ್ ಮಾತನಾಡಿದ್ದಾರೆ.