Rachita Ram: ‘ನಂಗೆ ಯಾರೂ ಪ್ರಶ್ನೆ ಕೇಳಂಗಿಲ್ಲ’; ರಚಿತಾ ರಾಮ್ ಹೀಗೆ ಹೇಳಿದ್ದೇಕೆ?

| Updated By: ರಾಜೇಶ್ ದುಗ್ಗುಮನೆ

Updated on: Apr 05, 2023 | 11:50 AM

ಪ್ರಜ್ವಲ್ ದೇವರಾಜ್ ಹಾಗೂ ರಚಿತಾ ರಾಮ್ ನಟಿಸಿರುವ ‘ವೀರಂ’ ಸಿನಿಮಾ ರಿಲೀಸ್​ಗೆ ರೆಡಿ ಇದೆ. ಈ ಚಿತ್ರದ ಬಗ್ಗೆ ಅವರು ವೇದಕೆ ಮೇಲೆ ಮಾತನಾಡಿದ್ದಾರೆ.

ಪ್ರಜ್ವಲ್ ದೇವರಾಜ್ (Prajwal Devaraj) ಹಾಗೂ ರಚಿತಾ ರಾಮ್ ನಟಿಸಿರುವ ‘ವೀರಂ’ ಸಿನಿಮಾ ರಿಲೀಸ್​ಗೆ ರೆಡಿ ಇದೆ. ಖದರ್ ಕುಮಾರ್ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬಂದಿದೆ. ಏಪ್ರಿಲ್ 7ರಂದು ‘ವೀರಂ’ ತೆರೆಗೆ ಬರುತ್ತಿದೆ. ಈ ಚಿತ್ರದಲ್ಲಿ ಶ್ರೀನಗರ ಕಿಟ್ಟಿ (Srinagar Kitty) ಮೊದಲಾದವರು ಪ್ರಮುಖ ಪಾತ್ರ ಮಾಡಿದ್ದಾರೆ. ಇತ್ತೀಚೆಗೆ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿತು. ಈ ವೇಳೆ ರಚಿತಾಗೆ ಪ್ರಶ್ನೆ ಕೇಳಿ ಎಂದು ಆ್ಯಂಕರ್ ಮಾಧ್ಯಮದವರಿಗೆ ಹೇಳಿದರು. ಆಗ ರಚಿತಾ ರಾಮ್​ ‘ಈ ಮೊದಲು ಬಂದವರಿಗೆ ಯಾರೂ ಪ್ರಶ್ನೆ ಕೇಳಿಲ್ಲ. ನಂಗೂ ಯಾರೂ ಪ್ರಶ್ನೆ ಕೇಳುವಂತಿಲ್ಲ’ ಎಂದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow us on