Radhika Pandith: ತಾನೇ ಹಾಡು ಹಾಕಿಕೊಂಡು ಡಾನ್ಸ್ ಮಾಡಿದ ಯಥರ್ವ್, ಜೊತೆಗೂಡಿದ ಆಯ್ರಾ; ವಿಡಿಯೊ ನೋಡಿ
ರಾಧಿಕಾ ಪಂಡಿತ್- ಯಶ್​ ಮಗ ಯಥರ್ವ

Radhika Pandith: ತಾನೇ ಹಾಡು ಹಾಕಿಕೊಂಡು ಡಾನ್ಸ್ ಮಾಡಿದ ಯಥರ್ವ್, ಜೊತೆಗೂಡಿದ ಆಯ್ರಾ; ವಿಡಿಯೊ ನೋಡಿ

| Updated By: shivaprasad.hs

Updated on: Sep 07, 2021 | 4:40 PM

ಸ್ಯಾಂಡಲ್​ವುಡ್​ನ ತಾರಾ ಜೋಡಿ ಯಶ್ ಹಾಗೂ ರಾಧಿಕಾ ಪಂಡಿತ್ ಮಕ್ಕಳಾದ ಆಯ್ರಾ ಹಾಗೂ ಯಥರ್ವ್ ತಮ್ಮ ತುಂಟಾಟಗಳಿಂದ ಎಲ್ಲರ ಮನಗೆದ್ದಿದ್ದಾರೆ. ಇತ್ತೀಚೆಗೆ ರಾಧಿಕಾ ಹಂಚಿಕೊಂಡ ಹೊಸ ವಿಡಿಯೊದಲ್ಲಿ ಯಥರ್ವ್ ತಾನೇ ಹಾಡು ಹಾಕಿಕೊಂಡು ಕುಣಿದು ಕುಪ್ಪಳಿಸಿದ್ದಾನೆ. ಇದನ್ನು ನೋಡಿ ಅಭಿಮಾನಿಗಳೂ ಎಂಜಾಯ್ ಮಾಡಿದ್ದಾರೆ.

ಕನ್ನಡದ ಜನಪ್ರಿಯ ನಟಿ ರಾಧಿಕಾ ಪಂಡಿತ್ ಸಾಮಾಜಿಕ ಜಾಲತಾಣದ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ. ಮಕ್ಕಳಾದ ಯಥರ್ವ್ ಹಾಗೂ ಆಯ್ರಾ ಅವರ ಮುದ್ದಾದ ಫೊಟೊ, ವಿಡಿಯೊಗಳನ್ನು ಹಂಚಿಕೊಳ್ಳುವ ಮುಖಾಂತರ ಅವರು ಮಕ್ಕಳ ಸಂತೋಷದ ಆಟಗಳನ್ನು ಅಭಿಮಾನಿಗಳಿಗೂ ತೋರಿಸಿ ಎಂಜಾಯ್ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಅವರು ಯಥರ್ವ್​​ನ ಚಾಣಾಕ್ಷತೆಯನ್ನು ತೋರಿಸುವ ವಿಡಿಯೊವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಯಥರ್ವ್ ಗೂಗಲ್ ಮೂಲಕ ತಾನೇ ಹಾಡು ಹಾಕಿಕೊಂಡು ಕುಣಿದು ಕುಪ್ಪಳಿಸಿದ್ದಾನೆ. ಇದಕ್ಕೆ ಆಯ್ರಾ ಕೂಡ ಜೊತೆಯಾಗಿದ್ದಾಳೆ. ಈ ಮುದ್ದಾದ ವಿಡಿಯೊವನ್ನು ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.

ಇದನ್ನೂ ಓದಿ:

ಕೃಷ್ಣ ಜನ್ಮಾಷ್ಟಮಿ ದಿನ ಆಯ್ರಾ, ಯಥರ್ವ್​​ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್

ಬಾಯ್​ಫ್ರೆಂಡ್​ ಕಳೆದುಕೊಂಡಿದ್ದ ಸಂಜಯ್​ ದತ್​ ಪುತ್ರಿಗೆ ಅಭಿಮಾನಿಯ ಪ್ರಪೋಸ್​; ಒಪ್ಪಿಕೊಂಡ್ರಾ ತ್ರಿಶಾಲಾ?

(Radhika Panddith shares a video of Yatharv plays his fav song and dance with sister Ayra)