ಉಮಾಶ್ರೀ ಮಿಮಿಕ್ರಿ ಮಾಡಿದ ರಾಘವೇಂದ್ರ; ಪರ್ಫೆಕ್ಷನ್ ಅಂದ್ರೆ ಇದು

Updated on: Aug 06, 2025 | 8:25 AM

ಉಮಾಶ್ರೀ ಅವರು ಶ್ರೇಷ್ಠ ನಟಿ. ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರನ್ನು ಮಿಮಿಕ್ರಿ ಮಾಡೋದು ಎಂದರೆ ಅದು ಅಂತಿಂತಹ ಚಾಲೆಂಜ್ ಅಲ್ಲವೇ ಅಲ್ಲ. ಆ ಚಾಲೆಂಜ್​ನ ಯಶಸ್ವಿಯಾಗಿ ನಿರ್ವಹಿಸಿದ್ದಾರೆ ರಾಘವೇಂದ್ರ. ಜೀ ಕನ್ನಡ ವಾಹಿನಿಯು ಈ ವಿಚಾರದ ಬಗ್ಗೆ ಪ್ರೋಮೋ ಹಂಚಿಕೊಂಡಿದೆ.

ರಾಘವೇಂದ್ರ ಅವರು ಹಲವು ಶೋಗಳಲ್ಲಿ ಮಿಂಚಿ ಗಮನ ಸೆಳೆದಿದ್ದಾರೆ. ಈಗ ಅವರ ಮಿಮಿಕ್ರಿಯನ್ನು ರಘು ಮಾಡಿ ತೋರಿಸಿದ್ದಾರೆ. ಅವರು ದಿಟ್ಟೋ ದಿಟ್ಟೋ ಮಿಮಿಕ್ರಿ ಮಾಡಿ ಭೇಷ್ ಎನಿಸಿಕೊಂಡಿದ್ದಾರೆ. ಅವರನ್ನು ಅನೇಕರು ಹಾಡಿ ಹೊಗಳಿದ್ದಾರೆ. ಪರ್ಫೆಕ್ಷನ್ ಅಂದ್ರೆ ಇದು ಎಂದು ಅನೇಕರು ಹೇಳಿದ್ದಾರೆ. ‘ಕುರಿಗಳು ಸಾರ್ ಕುರಿಗಳು’ ಮೊದಲಾದ ಸಿನಿಮಾಗಳಲ್ಲಿ ಉಮಾಶ್ರೀ (Umashree) ಬಣ್ಣ ಹಚ್ಚಿದ್ದರು. ಈ ಸಂದರ್ಭದಲ್ಲಿ ಅವರು ಯಾವ ರೀತಿಯಲ್ಲಿ ಮಾತನಾಡಿದ್ದರು ಎಂಬುದನ್ನು ರಾಘವೇಂದ್ರ ಅವರು ‘ಮಹಾನಟಿ’ಯಲ್ಲಿ ಮಾಡಿ ತೋರಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Aug 05, 2025 03:21 PM