ಕುತ್ತಿಗೆಗೆ ರಬಸವಾಗಿ ಬಡಿದ ಚೆಂಡು! ನೋವು ತಾಳಲಾರದೆ ಬಿದ್ದು ಒದ್ದಾಡಿದ ಬ್ಯಾಟರ್; ವಿಡಿಯೋ
Rahmanullah Gurbaz Neck Injury: ಅಫ್ಘಾನಿಸ್ತಾನ-ವೆಸ್ಟ್ ಇಂಡೀಸ್ ಟಿ20 ಪಂದ್ಯದಲ್ಲಿ ರಹಮಾನುಲ್ಲಾ ಗುರ್ಬಾಜ್ ಕುತ್ತಿಗೆಗೆ ಚೆಂಡು ತಗುಲಿ ಅಪಾಯದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಘಟನೆ ಆತಂಕ ಸೃಷ್ಟಿಸಿದರೂ, ಅದೃಷ್ಟವಶಾತ್ ಗುರ್ಬಾಜ್‌ಗೆ ಗಂಭೀರ ಗಾಯವಾಗಿಲ್ಲ. ನೋವಿನ ನಡುವೆಯೂ ಬ್ಯಾಟಿಂಗ್ ಮುಂದುವರಿಸಿ, 58 ಎಸೆತಗಳಲ್ಲಿ 71 ರನ್ ಗಳಿಸಿ ತಂಡಕ್ಕೆ ನೆರವಾದರು, ಅವರ ಸ್ಥೈರ್ಯ ಮೆಚ್ಚುವಂತದ್ದು.
ಅಫ್ಘಾನಿಸ್ತಾನ ಹಾಗೂ ವೆಸ್ಟ್ ಇಂಡೀಸ್ ನಡುವೆ ನಡೆದ ಟಿ20 ಪಂದ್ಯದಲ್ಲಿ ಅಫ್ಘಾನಿಸ್ತಾನದ ಆರಂಭಿಕ ಆಟಗಾರ ರಹಮಾನುಲ್ಲಾ ಗುರ್ಬಾಜ್ ಕೂದಲೆಳೆ ಅಂತರದಲ್ಲಿ ಅವಘಡದಿಂದ ಪಾರಾಗಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ20 ಪಂದ್ಯದ ಸಮಯದಲ್ಲಿ ಗುರ್ಬಾಜ್ ಗಾಯಕ್ಕೆ ತುತ್ತಾದರು. ರಬಸವಾಗಿ ಬಂದ ಚೆಂಡು ಗುರ್ಬಾಜ್ ಅವರ ಕುತ್ತಿಗೆಗೆ ತಗುಲಿತು. ಇದರಿಂದ ಗುರ್ಬಾಜ್ ನೋವಿನಿಂದ ಮೈದಾನದಲ್ಲೇ ಬಿದ್ದು ನರಳಲಾರಂಭಿಸಿದರು.
ಪಂದ್ಯದ 15 ನೇ ಓವರ್‌ನಲ್ಲಿ ನಡೆದ ಈ ಘಟನೆಯಲ್ಲಿ ಚೆಂಡು ಗುರ್ಬಾಜ್ ಅವರ ಕುತ್ತಿಗೆಗೆ ತಗುಲಿತು. ಚೆಂಡು ಗುರ್ಬಾಜ್ ಕುತ್ತಿಗೆಗೆ ತಗುಲಿದ ತಕ್ಷಣ, ಅವರು ನೋವಿನಿಂದ ನರಳಲು ಪ್ರಾರಂಭಿಸಿದರು. ಅವರ ಹೆಲ್ಮೆಟ್ ನೆಲಕ್ಕೆ ಬಿದ್ದಿತು. ಅಂಪೈರ್‌ಗಳು ತಕ್ಷಣ ಅಫ್ಘಾನಿಸ್ತಾನ ಫಿಸಿಯೋವನ್ನು ಮೈದಾನಕ್ಕೆ ಕರೆಸಿದರು. ಆಟವನ್ನು ಸಾಕಷ್ಟು ಸಮಯದವರೆಗೆ ನಿಲ್ಲಿಸಲಾಯಿತು. ಅದೃಷ್ಟವಶಾತ್ ಗುರ್ಬಾಜ್ ಗಂಭೀರವಾಗಿ ಗಾಯಗೊಂಡಿರಲಿಲ್ಲ, ಹೀಗಾಗಿ ಅವರು ಬ್ಯಾಟಿಂಗ್ ಮುಂದುವರಿಸಿ 58 ಎಸೆತಗಳಲ್ಲಿ 71 ರನ್ ಗಳಿಸಿದರು.