Kuja – Rahu Conjunction 2024 :ಕುಜ-ರಾಹು ಸಂಯೋಗ ಮೀನ ರಾಶಿಯ ಮೇಲೆ ಹೇಗೆ ಪ್ರಭಾವ ಬೀರಲಿದೆ?
ರಾಹು ಕುಜನ ಸಂಯೋಗವನ್ನು ಅಂಗಾರಕ ಯೋಗ ಎಂದು ಕರೆಯಲಾಗುತ್ತದೆ. ಈ ಯೋಗ ಜೂನ್ 1ರ ವರೆಗೆ ಸಂಭವಿಸಲಿದೆ. ಕಡೆಯ ರಾಶಿಯಾದ ಮೀನರಾಶಿಯ ಮೇಲೆ ಅಂಗಾರಕ ಯೋಗದ ಪ್ರಭಾವದ ಹೇಗಿರುತ್ತದೆ ಎಂಬುದರ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಕುರಿತು ಮಾಹಿತಿ ನೀಡಿದ್ದಾರೆ.
ಈ ವರ್ಷ (2024) ಮೇ ತಿಂಗಳ ಪೂರ್ತಿ ಕುಜ ಮತ್ತು ರಾಹು ಎರಡು ಗ್ರಹಗಳು ಮೀನ ರಾಶಿಯಲ್ಲಿ ಸಂಚಾರ ಮಾಡುತ್ತಿವೆ. ರಾಹು ಕುಜನ ಸಂಯೋಗವನ್ನು ಅಂಗಾರಕ ಯೋಗ ಎಂದು ಕರೆಯಲಾಗುತ್ತದೆ. ಈ ಯೋಗ ಜೂನ್ 1ರ ವರೆಗೆ ಸಂಭವಿಸಲಿದೆ. ಈ ಅಂಗಾರಕ ಯೋಗ ಒಂದು ತಿಂಗಳ ವರೆಗೆ ದ್ವಾದಶ ರಾಶಿಗಳ ಮೇಲೆ ಹೇಗೆ ಪ್ರಭಾವ ಬೀರಲಿದೆ ಎಂಬ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಕುರಿತು ಮಾಹಿತಿ ನೀಡಿದ್ದಾರೆ. ಕಡೆಯ ರಾಶಿಯಾದ ಮೀನರಾಶಿಯ ಅಂಗಾರಕ ಯೋಗದ ಪ್ರಭಾವದ ಬಗ್ಗೆ ಹೇಳುವುದಾದರೆ ಜನ್ಮದಲ್ಲಿಯೇ ಈ ಸಂಯೋಗ ಸಂಭವಿಸುವುದರಿಂದ ಧನ ಯೋಗ ಪ್ರಾಪ್ತಿಯಾಗಲಿದೆ. ಹಿರಿಯರ ಆರ್ಶಿವಾದ ಈ ರಾಶಿಯವರಿಗೆ ದೊರೆಯಲಿದೆ. ಆದರೆ ವ್ಯಾಪಾರ, ವ್ಯವಹಾರ ವಾಹನ ಖರೀದಿಯಲ್ಲಿ ಕಂಟಕವಾಗಲಿದೆ. ಆದಷ್ಟು ಹುಷಾರಾಗಿರಿ. ದಾಂಪತ್ಯದಲ್ಲಿ ಜೀವನದಲ್ಲಿ ತೊಂದರೆಯುಂಟಾಗಬಹುದು. ಆದ್ದರಿಂದ ನಾಗನ ದರ್ಶನ ಮತ್ತು ಅಭಿಷೇಕ ಮಾಡಿಸಿ. ಓಂ ಅನಂತಾಯ ನಮಃ ಮಂತ್ರ ಪರಿಸಿ. ಸಾಸಿವೆ ಎಣ್ಣೆಯಿಂದ ಶನಿ ದೇವರಿಗೆ ದೀಪ ಹಚ್ಚಿವುದರಿಂದ ಅಂಗಾರಕ ಯೋಗದಿಂದ ಹೆಚ್ಚಿನ ಫಲ ಲಭಿಸಲಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ