Video: ಮತದಾರರ ಅಧಿಕಾರ ಯಾತ್ರೆ: ಬಿಹಾರದಲ್ಲಿ ರಾಹುಲ್, ತೇಜಸ್ವಿ ಬುಲೆಟ್ ರೈಡ್
ಕಾಂಗ್ರೆಸ್ ಸಂಸದ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ತೇಜಸ್ವಿ ಯಾದವ್ ಅವರೊಂದಿಗೆ ಬಿಹಾರದ ಪೂರ್ಣಿಯಾ ಜಿಲ್ಲೆಯಲ್ಲಿ ಎಂಟನೇ ದಿನವಾದ ಭಾನುವಾರ ಮತದಾರರ ಅಧಿಕಾರ ಯಾತ್ರೆಯನ್ನು ಮುಂದುವರೆಸಿದರು. ರಾಜ್ಯದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ಪ್ರತಿಭಟನೆ ಆರಂಭಿಸಿದ್ದರು, ಅದರ ಭಾಗವಾಗಿ ಇಬ್ಬರೂ ನಾಯಕರು ಬೈಕ್ನಲ್ಲಿ ಸವಾರಿ ಮಾಡುತ್ತಿರುವುದು ಕಂಡುಬಂದಿದೆ.
ಪಾಟ್ನಾ, ಆಗಸ್ಟ್ 24: ಕಾಂಗ್ರೆಸ್ ಸಂಸದ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ತೇಜಸ್ವಿ ಯಾದವ್ ಅವರೊಂದಿಗೆ ಬಿಹಾರದ ಪೂರ್ಣಿಯಾ ಜಿಲ್ಲೆಯಲ್ಲಿ ಎಂಟನೇ ದಿನವಾದ ಭಾನುವಾರ ಮತದಾರರ ಅಧಿಕಾರ ಯಾತ್ರೆಯನ್ನು ಮುಂದುವರೆಸಿದರು.
ರಾಜ್ಯದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ಪ್ರತಿಭಟನೆ ಆರಂಭಿಸಿದ್ದರು, ಅದರ ಭಾಗವಾಗಿ ಇಬ್ಬರೂ ನಾಯಕರು ಬೈಕ್ನಲ್ಲಿ ಸವಾರಿ ಮಾಡುತ್ತಿರುವುದು ಕಂಡುಬಂದಿದೆ. ಪಂಚಮುಖಿ ಮಂದಿರ, ಫೋರ್ಬ್ಸ್‌ಗಂಜ್ ರಸ್ತೆ, ಹೋಪ್ ಆಸ್ಪತ್ರೆ ಚೌಕ್, ರಾಂಬಾಗ್, ಕಸ್ಬಾ ಬಜಾರ್ ಮತ್ತು ಝೀರೋ ಮೈಲ್ ಸೇರಿದಂತೆ ಪ್ರಮುಖ ಸ್ಥಳಗಳ ಮೂಲಕ ಸಂಚರಿಸಿ ಅರಾರಿಯಾದಲ್ಲಿ ದಿನದ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ