ಹಿಂದೂ ಯುವತಿಯರಿಗೆ ಮರ್ಮಾಂಗ ತೋರಿಸಿ ವಿಕೃತವಾಗಿ ವರ್ತಿಸುತ್ತಿದ್ದ ಅಕ್ಬರ್ಗೆ ಧರ್ಮದೇಟು
ರಾಯಚೂರಿನಲ್ಲಿ, ಓರ್ವ ಯುವಕ ಹಿಂದೂ ಯುವತಿಯರಿಗೆ ಮರ್ಮಾಂಗ ತೋರಿಸುತ್ತಿದ್ದ ಘಟನೆ ನಡೆದಿದೆ. ಸ್ಥಳೀಯರು ಈತನನ್ನು ಹಿಡಿದು ಥಳಿಸಿದ್ದಾರೆ ಮತ್ತು ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆರೋಪಿ ಅಕ್ಬರ್ ಎಂಬಾತನು ಕಾಲೇಜಿಗೆ ಹೋಗುವ ವಿದ್ಯಾರ್ಥಿನಿಯರನ್ನು ಹಿಂಬಾಲಿಸಿ ಈ ಕೃತ್ಯವನ್ನು ನಡೆಸುತ್ತಿದ್ದನು.
ರಾಯಚೂರು, ಡಿಸೆಂಬರ್ 09: ರಸ್ತೆಯಲ್ಲಿ ಹೋಗುವ ಹಿಂದೂ ಯುವತಿಯರಿಗೆ ಮರ್ಮಾಂಗ ತೋರಿಸಿ, ವಿಕೃತವಾಗಿ ವರ್ತಿಸುತ್ತಿದ್ದ ಯುವಕನಿಗೆ ಸ್ಥಳೀಯರು ಹಿಡಿದು ತಳಿಸಿದ್ದಾರೆ. ಆರೋಪಿ ಅಕ್ಬರ್ ರಾಯಚೂರು ನಗರದ ನಿಲ್ದಾಣದ ಬಳಿಯ ಸಾಯಿಬಾಬಾ ದೇವಸ್ಥಾನದ ಹಿಂಭಾಗದ ರಸ್ತೆಯಲ್ಲಿ ಕಾಲೇಜಿಗೆ ಹೋಗುವ ಹಿಂದೂ ವಿದ್ಯಾರ್ಥಿನಿಯರನ್ನು ಮತ್ತು ಮಹಿಳೆಯರನ್ನು ಹಿಂಬಾಲಿಸಿಕೊಂಡು ಹೋಗುತ್ತಿದ್ದನು.
ನಂತರ ಅವರ ಮುಂದೆ ನಿಂತು ಮರ್ಮಾಂಗ ತೋರಿಸುತ್ತಿದ್ದನು. ವಿಕೃತ ಕಾಮಿ ಹಿಂದು ಯುವತಿಯರಿಗೆ ಮಾತ್ರ ಮರ್ಮಾಂಗ ತೋರಿಸುತ್ತಿದ್ದನು. ಈತನ ವಿಕೃತಿಯನ್ನು ಸ್ಥಳೀಯರು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ನಿತ್ಯ ಇದೇ ರೀತಿಯಾಗಿ ಮಾಡುತ್ತಿದ್ದ, ಅಕ್ಬರ್ನನ್ನು ಸ್ಥಳೀಯರು ಹಿಡಿದು ಥಳಿಸಿದ್ದಾರೆ. ಕೂಡಲೇ, ಪೊಲೀಸರು ಕಾಮುಕ ಅಕ್ಬರ್ನನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: Dec 09, 2024 10:20 AM