ಸಿದ್ದರಾಮಯ್ಯ ಬಜೆಟ್: ಗೃಹಲಕ್ಷ್ಮಿ ಯೋಜನೆ ನಿಲ್ಲಿಸಿ ಮಹಿಳೆಯರನ್ನು ಉದ್ಯಮಶೀಲರಾಗಿಸಿ ಎಂದ ರಾಯಚೂರು ಮಹಿಳೆ

Updated on: Mar 06, 2025 | 12:05 PM

ಉತ್ತರ ಕರ್ನಾಟಕ ಭಾಗದಲ್ಲಿ ನಿರುದ್ಯೋಗ ಸಮಸ್ಯೆ ಜಾಸ್ತಿಯಿದೆ. ಸರ್ಕಾರಿ ಹುದ್ದೆ ಅಂತ ನೆಚ್ಚಿಕೊಂಡು ಕೂರೋದ್ರಲ್ಲಿ ಅರ್ಥವಿಲ್ಲ, ಯಾಕೆಂದರೆ 4,000 ಪೋಸ್ಟ್​ಗಳಿಗೆ 4 ಲಕ್ಷ ಯುವಕರು ಅರ್ಜಿ ಸಲ್ಲಿಸುತ್ತಾರೆ, ನೌಕರಿಗಳಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸರ್ಕಾರ ಸಿಇಟಿಯಂತೆ ನಡೆಸಬೇಕು, ಮ್ಯಾನುಯಲ್, ಆಫ್​ಲೈನ್ ಪರೀಕ್ಷೆ ನಡೆಸಿದರೆ ಅಕ್ರಮಗಳಿಗೆ ಹೆಚ್ಚು ಅವಕಾಶವಿರುತ್ತದೆ ಎಂದು ನಮ್ಮ ವರದಿಗಾರನೊಂದಿಗೆ ಮಾತಾಡಿರುವ ಯುವಕ ಹೇಳುತ್ತಾರೆ,

ರಾಯಚೂರು, ಮಾರ್ಚ್ 6 : ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ನಾಳೆ ರಾಜ್ಯ ಬಜೆಟ್ ಮಂಡಿಸಲಿದ್ದಾರೆ. ನಾಡಿನ ಜನ ಸಿಎಂ ಮಂಡಿಸುವ ಬಜೆಟ್ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದು ನಮ್ಮ ರಾಯಚೂರು ವರದಿಗಾರ ಒಂದಿಬ್ಬರೊಂದಿಗೆ ಮಾತಾಡಿದ್ದಾರೆ. ಮಹಿಳೆ ಹೇಳುವ ಪ್ರಕಾರ ಸರ್ಕಾರ ಗೃಹಲಕ್ಷ್ಮಿ ಯೋಜನೆಯನ್ನು ನಿಲ್ಲಿಸಿ ಅದರ ಬದಲಿಗೆ ಸಣ್ಣ ಕೈಗಾರಿಕೆಗಳಲ್ಲಿ ತೊಡಗಿಸಿಕೊಳ್ಳಲಿಚ್ಛಿಸುವ ಮಹಿಳೆಯರಿಗೆ ಸಾಲ, ಸಹಾಯ ಧನ ಮತ್ತು ಸಬ್ಸಿಡಿಯನ್ನು ನೀಡಬೇಕು. ಗೃಹಲಕ್ಷ್ಮಿ ಹಣವಾದರೋ ಒಂದರೆಡು ದಿನಗಳಲ್ಲಿ ಖರ್ಚಾಗುತ್ತದೆ, ಅದರೆ ಸಣ್ಣ ಕೈಗಾರಿಕೆಗಳ ಮೂಲಕ ಮಹಿಳೆಯರು ಸ್ವಾವಲಂಬಿಗಳಾಗುತ್ತಾರೆ ಮತ್ತು ಅವರ ಉಪಜೀವನ ಸರಾಗವಾಗಿ ನಡೆಯುತ್ತದೆ ಎಂದು ಮಹಿಳೆ ಹೇಳುತ್ತಾರೆ

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಸಿದ್ದರಾಮಯ್ಯ 16ನೇ ಬಜೆಟ್​​ಗೆ ಕೌಂಟ್ ಡೌನ್​: ರಾಜ್ಯದ ಇತಿಹಾಸದಲ್ಲೇ ಮೊದಲ ಬಿಗ್​ ಬಜೆಟ್