Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾವಣಗೆರೆಯ ಫುಡ್ ಸೇಫ್ಟಿ ಅಧಿಕಾರಿ ತನ್ನ ಸೇಫ್ಟಿ ಮಾಡಿಕೊಂಡ ಪರಿ ನೋಡಿದರೆ ದಂಗಾಗುತ್ತೀರಿ!

ದಾವಣಗೆರೆಯ ಫುಡ್ ಸೇಫ್ಟಿ ಅಧಿಕಾರಿ ತನ್ನ ಸೇಫ್ಟಿ ಮಾಡಿಕೊಂಡ ಪರಿ ನೋಡಿದರೆ ದಂಗಾಗುತ್ತೀರಿ!

ಅರುಣ್​ ಕುಮಾರ್​ ಬೆಳ್ಳಿ
|

Updated on:Mar 06, 2025 | 11:58 AM

ಫುಡ್ ಸೇಫ್ಟಿ ಮಾತು ಹಾಗಿರಲಿ, ಮೊದಲು ತನ್ನ ಸೇಫ್ಟಿ ಮಾಡಿಕೊಂಡರಾಯಿತು ಅಂತ ನಾಗರಾಜ್ ನಗನಾಣ್ಯ, ಆಸ್ತಿಪಾಸ್ತಿ ಮಾಡಿಕೊಂಡಿರುವಂತಿದೆ. ಸರ್ಕಾರೀ ನೌಕರರ ಅದರಲ್ಲೂ ವಿಶೇಷವಾಗಿ ಅಧಿಕಾರಿಗಳ ಲಂಚಕೋರತನ ರಾಜ್ಯದಲ್ಲಿ ಯಾವ ಸರ್ಕಾರ ಅಧಿಕಾರಕ್ಕೆ ಬಂದರೂ ನಿಲ್ಲದು ಮಾರಾಯ್ರೇ. ಹಿಂದೆ ಮುಖ್ಯಮಂತ್ರಿಯಾಗಿದ್ದ ವಿರೇಂದ್ರ ಪಾಟೀಲರು ಇದಕ್ಕೆ ಕಡಿವಾಣ ಹಾಕಿದ್ದರಂತೆ.

ದಾವಣಗೆರೆ, ಮಾರ್ಚ್ 6 : ವಾಸಕ್ಕೆ ಬಂಗ್ಲೆಯನ್ನು ಮೀರಿಸುವ ಮನೆ, ಮನೆಯ ಹೆಣ್ಣಮಕ್ಕಳಿಗೆ ತೊಡಲು ಬಗೆಬಗೆಯ ಚಿನ್ನಾಭರಣ, ಹತ್ತಾರು ಎಕರೆ ಜಮೀನು, ತುಂಬಿ ತುಳುಕುವ ಬ್ಯಾಂಕ್ ಬ್ಯಾಲೆನ್ಸ್- ಮತ್ತೇನು ಬೇಕು ಒಬ್ಬ ಸರ್ಕಾರಿ ಅಧಿಕಾರಿಗೆ? ಇಂದು ಬೆಳಗ್ಗೆ ಲೋಕಾಯುಕ್ತ ದಾಳಿ (Lokayukta raid) ನಡೆಸಿರುವ ಮೂರು ಸರ್ಕಾರಿ ಅಧಿಕಾರಿಗಳ ಮನೆಗಳಲ್ಲಿ ದಾವಣಗೆರೆಯ ಆಹಾರ ಸುರಕ್ಷತಾ ಅಧಿಕಾರಿ ಡಾ ನಾಗರಾಜ್ ಮನೆಯೂ ಒಂದು. ಅವರ ಮನೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳು, ನಗದು, ಆಸ್ತಿಪತ್ರಗಳು ಪತ್ತೆಯಾಗಿದ್ದು ಪರಿಶೀಲನೆ ಜಾರಿಯಲ್ಲಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ತಿಪ್ಪೇಸ್ವಾಮಿ ಅಲ್ಲ, ಬಂಗಾರ ಸ್ವಾಮಿ! ಲೋಕಾಯುಕ್ತ ದಾಳಿ ವೇಳೆ ಮನೆಯಲ್ಲಿ ಸಿಕ್ತು ಕೆಜಿಗಟ್ಟಲೆ ಚಿನ್ನ, ಬೆಳ್ಳಿ

Published on: Mar 06, 2025 10:28 AM