Monsoon delays: ಮಾನ್ಸೂನ್ ಸೀಸನ್ ಶುರುವಾಗಿ ಎರಡು ವಾರ ಕಳೆಯಿತು, ಮಳೆರಾಯ ಇನ್ನೂ ಅದೃಶ್ಯ, ಯಾದಗಿರಿ ರೈತರು ಕಂಗಾಲು
ಇನ್ನೊಂದು ವಾರದ ಅವಧಿಯಲ್ಲಿ ಮಳೆಯಾಗದಿದ್ದರೆ ಕ್ಷಾಮದ ಸ್ಥಿತಿ ತಲೆದೋರಲಿದೆ ಎಂದು ರೈತರು ನೋವು ಮತ್ತು ಭಯ ಮಿಶ್ರಿತ ಧ್ವನಿಯಲ್ಲಿ ಹೇಳುತ್ತಾರೆ.
ಯಾದಗಿರಿ: ಮಾನ್ಸೂನ್ ಸೀಸನ್ (Monsoon season) ಶುರುವಾಗಿ ಎರಡು ವಾರ ಕಳೆದರೂ ರಾಜ್ಯದ ಹಲವಾರು ಭಾಗಗಳಲ್ಲಿ ಮಳೆಯಾಗದೆ ರೈತಾಪಿ ಜನ ತೀವ್ರ ಕಳವಳಗೊಂಡಿದ್ದಾರೆ. ಉತ್ತರ ಕರ್ನಾಟಕದ ರೈತರಂತೂ ಮಳೆಯಿಲ್ಲದೆ ಕಂಗಾಲಾಗರಾಗಿದ್ದಾರೆ. ಯಾದಗಿರಿ ಜಿಲ್ಲೆಯ ಮೂಲಕ ಹರಿದು ಹೋಗುವ ಭೀಮಾ ನದಿ (Bhima River ) ಸಂಪೂರ್ಣವಾಗಿ ಬತ್ತಿಹೋಗಿದ್ದು ರೈತರಿಗೆ ಗಾಯದ ಮೇಲೆ ಬರೆಯಿಟ್ಟಂತಾಗಿದೆ. ಭತ್ತ ಬೆಳೆಯುವ ರೈತರು ಗದ್ದೆಯನ್ನು ಹದಮಾಡಿಕೊಂಡು, ಸಸಿ ನಾಟಲು ಅಣಿಯಾಗಿದ್ದಾರೆ ಅದರೆ ಮಳೆರಾಯನ ಸುಳಿವೇ ಇಲ್ಲ. ಹತ್ತಿ ಮತ್ತು ಹೆಸರು ಬಿತ್ತುವದು ಸಹ ವಿಳಂಬಗೊಂಡಿದೆ. ಇನ್ನೊಂದು ವಾರದ ಅವಧಿಯಲ್ಲಿ ಮಳೆಯಾಗದಿದ್ದರೆ ಕ್ಷಾಮದ (drought) ಸ್ಥಿತಿ ತಲೆದೋರಲಿದೆ ಎಂದು ರೈತರು ನೋವು ಮತ್ತು ಆತಂಕ ತುಂಬಿದ ಧ್ವನಿಯಲ್ಲಿ ಹೇಳುತ್ತಾರೆ. ಟಿವಿ9 ಕನ್ನಡ ವಾಹಿನಿಯ ಯಾದಗಿರಿ ವರದಿಗಾರ ಜಿಲ್ಲೆಯ ವಡಗೇರಾದ ರೈತರೊಂದಿಗೆ ಮಾತಾಡಿರುವ ವಿಡಿಯೋ ಇದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ