Video: ರಕ್ಷಾ ಬಂಧನ ಮುಹೂರ್ತ; ಪ್ರಸಿದ್ಧ ಜ್ಯೋತಿಷಿ  ನೀಡಿರುವ ಮಹತ್ವದ ಮಾಹಿತಿ ಇಲ್ಲಿದೆ!

Updated on: Aug 27, 2026 | 11:04 AM

ಪ್ರಯಾಗ್‌ರಾಜ್‌ನ ಖ್ಯಾತ ಜ್ಯೋತಿಷಿ ಶಿಪ್ರಾ ಸಚ್‌ದೇವ್, ಈ ವರ್ಷದ ರಕ್ಷಾ ಬಂಧನವನ್ನು ಆಗಸ್ಟ್ 28ರಂದು ಆಚರಿಸುವ ಬಗ್ಗೆ ಮಹತ್ವದ ಮಾಹಿತಿ ನೀಡಿದ್ದಾರೆ. ಅಂದು ಯಾವುದೇ ಭದ್ರಕಾಲವಿಲ್ಲದೆ ಪೂರ್ಣ ದಿನ ಹಬ್ಬ ಆಚರಿಸಬಹುದು. ರಾಖಿ ಕಟ್ಟುವ ಮುನ್ನ ಶಿವ, ವಿಷ್ಣು ಮತ್ತು ಗುರುಗಳಿಗೆ ಸಮರ್ಪಿಸುವುದು ಶ್ರೇಷ್ಠ. ಆ ಬಳಿಕ ಸಹೋದರನಿಗೆ ರಾಖಿ ಕಟ್ಟುವುದು ಅತ್ಯಂತ ಮಂಗಳಕರ ಎಂದು ಅವರು ಸಲಹೆ ನೀಡಿದ್ದಾರೆ. ಇದು ಶುಭ ಫಲ ನೀಡುತ್ತದೆ.

ಪ್ರಯಾಗ್‌ರಾಜ್‌ನ ಪ್ರಸಿದ್ಧ ಜ್ಯೋತಿಷಿ ಶಿಪ್ರಾ ಸಚ್‌ದೇವ್ (Shipra Sachdev) ಅವರು ಈ ವರ್ಷದ ರಕ್ಷಾ ಬಂಧನ ಹಬ್ಬದ ಶುಭ ಮುಹೂರ್ತದ ಕುರಿತು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಪೂರ್ಣಿಮೆ ತಿಥಿಯು ಆಗಸ್ಟ್ 27 ರಂದೇ ಪ್ರಾರಂಭವಾಗಲಿದ್ದರೂ, ಉದಯ ತಿಥಿಯ ಪ್ರಕಾರ ಆಗಸ್ಟ್ 28 ರಂದು ಪೂರ್ಣಿಮೆಯು ಬೆಳಿಗ್ಗೆ ಮುಕ್ತಾಯಗೊಳ್ಳುವುದರಿಂದ ಆಂದೇ ರಕ್ಷಾ ಬಂಧನವನ್ನು ಇಡೀ ದಿನ ವೈಭವದಿಂದ ಆಚರಿಸಬಹುದು ಎಂದು ತಿಳಿಸಿದ್ದಾರೆ. ಈ ಶುಭ ದಿನದಂದು ಭಾರತದಲ್ಲಿ ಯಾವುದೇ ಭದ್ರಕಾಲವಾಗಲಿ ಅಥವಾ ಚಂದ್ರಗ್ರಹಣದ ಛಾಯೆಯಾಗಲಿ ಇರುವುದಿಲ್ಲವಾದ್ದರಿಂದ ಹಬ್ಬವನ್ನು ನಿಸ್ಸಂಶಯವಾಗಿ ಆಚರಿಸಬಹುದು. ಇದೇ ವೇಳೆ ಧಾರ್ಮಿಕ ವಿಧಿವಿಧಾನಗಳ ಬಗ್ಗೆ ಮಾರ್ಗದರ್ಶನ ನೀಡಿದ ಅವರು, ಸಹೋದರಿಯರು ತಮ್ಮ ಸಹೋದರನಿಗೆ ರಾಖಿ ಕಟ್ಟುವ ಮುನ್ನ ಮೊದಲು ದೇವದೇವೇಶ ಶಿವನಿಗೆ, ನಂತರ ಶ್ರೀಮನ್ನಾರಾಯಣ ವಿಷ್ಣುವಿಗೆ, ತದನಂತರ ತಮ್ಮ ಗುರುಗಳಿಗೆ ರಾಖಿ ಸಮರ್ಪಿಸಿ ಆಶೀರ್ವಾದ ಪಡೆದು, ಆ ಬಳಿಕ ಸಹೋದರನಿಗೆ ರಾಖಿ ಕಟ್ಟುವುದು ಅತ್ಯಂತ ಶ್ರೇಷ್ಠ ಹಾಗೂ ಮಂಗಳಕರ ಎಂದು ಸಲಹೆ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Aug 27, 2026 11:02 AM
Loading...
Unable to load recommendations.
Follow Us