ಮತ್ತೊಂದು ಮದುವೆಗೆ ರೆಡಿಯಾಗಿದ್ದಾರಾ ವರ್ತೂರು ಸಂತೋಷ್: ಎಂಗೇಜ್​ಮೆಂಟ್​ ಬಗ್ಗೆ ರಕ್ಷಕ್ ಹೇಳಿದ್ದೇನು?

Updated on: Nov 14, 2023 | 9:17 PM

Bigg Boss: ವರ್ತೂರು ಸಂತೋಷ್​ಗೆ ಮದುವೆಯಾಗಿ ಮಗುವೊಂದು ಇರುವ ಸುದ್ದಿ ಇಂದು ವೈರಲ್ ಆಗಿದೆ. ಅವರ ಮಾವ, ಸಂತೋಷ್​ ವಿರುದ್ಧ ಹಲವು ಆರೋಪಗಳನ್ನು ಸಹ ಮಾಡಿದ್ದಾರೆ. ಇದರ ನಡುವೆ ಬಿಗ್​ಬಾಸ್ ಮನೆಯಿಂದ ಹೊರಗೆ ಬಂದ ಬಳಿಕ ಮತ್ತೊಂದು ಮದುವೆಯಾಗುವ ಯೋಚನೆಯಲ್ಲಿ ವರ್ತೂರು ಸಂತೋಷ್ ಇದ್ದಾರಾ ಎಂಬ ಅನುಮಾನವೂ ಮೂಡಿದೆ.

ಬಿಗ್​ಬಾಸ್ (Bigg Boss Kannada Season 10) ಮನೆಯಲ್ಲಿರುವ ವರ್ತೂರು ಸಂತೋಷ್​ (Varthur Santhosh) ಕುರಿತು ಹೊಸದೊಂದು ಸುದ್ದಿ ಹರಿದಾಡುತ್ತಿದೆ. ವರ್ತೂರು ಸಂತೋಷ್ ವೈವಾಹಿಕ ಜೀವನ ಇಷ್ಟು ದಿನ ಗುಟ್ಟಾಗಿತ್ತು. ಇದೀಗ ವರ್ತೂರು ಸಂತೋಷ್​​ಗೆ ಮದುವೆಯಾಗಿ ಹೆಣ್ಣು ಮಗುವೊಂದಿದೆ ಎಂಬ ಅಂಶ ಹೊರಗೆ ಬಿದ್ದಿರುವುದು ಮಾತ್ರವೇ ಅಲ್ಲದೆ, ವರ್ತೂರು ಸಂತೋಷ್​ರ ಮಾವ, ಸಂತೋಷ್​ ವಿರುದ್ಧ ಮಹಿಳಾ ಪೀಡಕ, ಮಾದಕ ವ್ಯಸನಿ ಇನ್ನೂ ಕೆಲವು ಆರೋಪಗಳನ್ನು ಸಹ ಮಾಡಿದ್ದಾರೆ. ಇದರ ನಡುವೆ ಬಿಗ್​ಬಾಸ್ ಮನೆಯಿಂದ ಹೊರಬಂದ ಬಳಿಕ ವರ್ತೂರು ಸಂತೋಷ್ ಮತ್ತೊಂದು ಮದುವೆಯಾಗಲು ಯೋಜನೆ ಹಾಕಿಕೊಂಡಿದ್ದಾರಾ ಎಂಬ ಅನುಮಾನವೂ ಇದೆ. ಕಳೆದ ವಾರ ಮನೆಯಿಂದ ಹೊರಬಂದ ಬುಲೆಟ್ ರಕ್ಷಕ್, ವರ್ತೂರು ಸಂತೋಷ್​ರ ನಿಶ್ಚಿತಾರ್ಥದ ಬಗ್ಗೆ ಹೀಗೆ ಹೇಳಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More