ರಾಮನಗರ ನಗರಸಭೆ ಕಾಂಗ್ರೆಸ್ ಸದಸ್ಯನ ಬರ್ತ್ ಡೇ ಪಾರ್ಟಿಯಲ್ಲಿ ಅರೆಬೆತ್ತಲೆ ಕುಣಿತ, ನೋಟುಗಳ ಮಳೆ!

Edited By: ಅರುಣ್​ ಕುಮಾರ್​ ಬೆಳ್ಳಿ

Updated on: Nov 26, 2022 | 2:56 PM

ಪಕ್ಷದ ಕಾರ್ಯಕರ್ತರು ಮತ್ತು ದೌಲತ್ ಬೆಂಬಲಿಗರು ಯಾರಬ್ ನಗರದಲ್ಲಿರುವ ಕಲ್ಯಾಣ ಮಂಟಪದಲ್ಲಿ ಹುಚ್ಚೆದ್ದು ಕುಣಿಯುವುದನ್ನು ನೋಡಬಹುದು.

ರಾಮನಗರ: ರಾಜಕೀಯ ಪಕ್ಷಗಳ ಪುಡಿ ನಾಯಕರಿಗೆ ತಮ್ಮ ಹುಟ್ಟುಹಬ್ಬಗಳನ್ನು ವೈಭವೋಪೇತವಾಗಿ ಆಚರಿಸಿಕೊಳ್ಳುವುದು ಪ್ರತಿಷ್ಠೆಯ ಸಂಕೇತವಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರರ (DK Shivakumar) ತವರು ಜಿಲ್ಲೆ ರಾಮನಗರ ನಗರ ಸಭೆಯ 19ನೇ ವಾರ್ಡ್ ಸದಸ್ಯ ದೌಲತ್ ಷರೀಫ್ (Doulat Shariff) ಎನ್ನುವವರು ತಮ್ಮ ಬರ್ತ್ ಡೇ ಆಚರಣೆಗೆ ಬೆಂಗಳೂರಿನಿಂದ ಡ್ಯಾನ್ಸರ್ ಗಳನ್ನು (dancers) ಕರೆಸಿ ಅವರು ಅರೆಬೆತ್ತಲೆಯಾಗಿ ಕುಣಿಯುವಾಗ ನೋಟುಗಳ ಸುರಿಮಳೆ ಮಾಡಿಸಿ ದೌಲತ್ತು ಮೆರೆದಿದ್ದಾರೆ. ಪಕ್ಷದ ಕಾರ್ಯಕರ್ತರು ಮತ್ತು ದೌಲತ್ ಬೆಂಬಲಿಗರು ಯಾರಬ್ ನಗರದಲ್ಲಿರುವ ಕಲ್ಯಾಣ ಮಂಟಪದಲ್ಲಿ ಹುಚ್ಚೆದ್ದು ಕುಣಿಯುವುದನ್ನು ನೋಡಬಹುದು.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us
TV9 Web

TV9 Kannada

Read More