‘ವಿಷಯ ಇರೋದು ರಮ್ಯಾ ಬಗ್ಗೆ ಅಲ್ಲ’: ಇಂಗ್ಲಿಷ್​ ಬಳಕೆ ಕುರಿತು ಪ್ರತಿಕ್ರಿಯೆ ನೀಡಿದ ರಮೇಶ್​ ಅರವಿಂದ್​

Updated on: Apr 10, 2023 | 8:21 PM

‘ವೀಕೆಂಡ್​ ವಿತ್​ ರಮೇಶ್​’ ಶೋನಲ್ಲಿ ರಮ್ಯಾ ಅವರು ಅತಿಯಾಗಿ ಇಂಗ್ಲಿಷ್​ ಮಾತಾಡಿದ್ದನ್ನು ಇಟ್ಟುಕೊಂಡು ನೆಟ್ಟಿಗರು ಟ್ರೋಲ್​ ಮಾಡಿದರು. ಆ ಬಗ್ಗೆ ರಮೇಶ್​ ಅರವಿಂದ್​ ಪ್ರತಿಕ್ರಿಯೆ ನೀಡಿದ್ದಾರೆ.

ಜೀ ಕನ್ನಡ ವಾಹಿನಿಯ ‘ವೀಕೆಂಡ್​ ವಿತ್​ ರಮೇಶ್​’ (Weekend With Ramesh) ಕಾರ್ಯಕ್ರಮದ 5ನೇ ಸೀಸನ್​ನಲ್ಲಿ ಮೊದಲ ಎಪಿಸೋಡ್​ಗೆ ನಟಿ ರಮ್ಯಾ ದಿವ್ಯ ಸ್ಪಂದನಾ (Ramya Divya Spandana) ಅವರು ಅತಿಥಿಯಾಗಿ ಬಂದರು. ಆದರೆ ಅವರು ಅತಿಯಾಗಿ ಇಂಗ್ಲಿಷ್​​ ಬಳಕೆ ಮಾಡಿದ್ದರಿಂದ ಪ್ರೇಕ್ಷಕರು ಗರಂ ಆದರು. ಸೋಶಿಯಲ್​ ಮೀಡಿಯಾದಲ್ಲಿ ಈ ವಿಚಾರವನ್ನು ಇಟ್ಟುಕೊಂಡು ಟ್ರೋಲ್​ ಮಾಡಲಾಯಿತು. ಈ ಕುರಿತು ನಟ/ನಿರೂಪಕ ರಮೇಶ್​ ಅರವಿಂದ್​ ಪ್ರತಿಕ್ರಿಯೆ ನೀಡಿದ್ದಾರೆ. ‘ಅದು ರಮ್ಯಾ ಬಗ್ಗೆ ಅಲ್ಲವೇ ಅಲ್ಲ. ನೀವು ಹೇಳುತ್ತಿರುವ ನಿಜವಾದ ವಿಷಯ ಏನು ಎಂಬುದು ಮಾತ್ರ ನನಗೆ ಮುಖ್ಯ. ಅದನ್ನು ನಾನು ಅಳವಡಿಸಿಕೊಳ್ಳಬೇಕು’ ಎಂದು ರಮೇಶ್​ ಅರವಿಂದ್​ (Ramesh Aravind) ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published on: Apr 10, 2023 07:26 PM
Follow Us
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More