Ramesh Aravind: ಯಕ್ಷಗಾನದ ವೇಷದಲ್ಲಿ ರಮೇಶ್ ಅರವಿಂದ್; ಫೋಟೋ ಕಂಡು ‘ಆಹಾ ಎಷ್ಟು ಚಂದ’ ಎಂದ ಫ್ಯಾನ್ಸ್
Ramesh Aravind | Yakshagana: ಇದೇ ಮೊದಲ ಬಾರಿಗೆ ಯಕ್ಷಗಾನದ ವೇಷ ಧರಿಸಿದ ರಮೇಶ್ ಅರವಿಂದ್ ಅವರಿಗೆ ಸಖತ್ ಖುಷಿ ಆಗಿದೆ. ಈ ಫೋಟೋಗಳನ್ನು ಕಂಡು ಅಭಿಮಾನಿಗಳು ಇಷ್ಟಪಟ್ಟಿದ್ದಾರೆ.
Updated on:Oct 13, 2022 | 11:05 AM

Ramesh Aravind poses in Yakshagana costume Photos go viral

Ramesh Aravind poses in Yakshagana costume Photos go viral

ಇತ್ತೀಚೆಗೆ ರಮೇಶ್ ಅರವಿಂದ್ ಅವರು ಯಕ್ಷಗಾನದ ವೇಷ ಧರಿಸಿದ್ದಾರೆ. ವೃತ್ತಿಪರ ಯಕ್ಷಗಾನದ ಕಲಾವಿದನ ರೀತಿಯಲ್ಲಿ ಬಣ್ಣ ಹಚ್ಚಿಕೊಂಡು ಪೋಸ್ ನೀಡಿದ್ದಾರೆ. ಆ ಫೋಟೋಗಳನ್ನು ಅವರು ಅಭಿಮಾನಿಗಳಿಗಾಗಿ ಹಂಚಿಕೊಂಡಿದ್ದಾರೆ. ಫೋಟೋ ಕೃಪೆ: Focus Raghu

ಇದೇ ಮೊದಲ ಬಾರಿಗೆ ಈ ರೀತಿಯ ಗೆಟಪ್ ಧರಿಸಿದ ರಮೇಶ್ ಅರವಿಂದ್ ಅವರಿಗೆ ಸಖತ್ ಖುಷಿ ಆಗಿದೆ. ಅಲ್ಲದೇ, ಯಕ್ಷಗಾನದ ಕಲೆ ಮತ್ತು ಅದರ ಕಲಾವಿದರ ಬಗ್ಗೆ ಇದ್ದ ಗೌರವ ಇನ್ನಷ್ಟು ಜಾಸ್ತಿ ಆಯಿತು ಎಂದು ಅವರು ಹೇಳಿದ್ದಾರೆ. ಫೋಟೋ ಕೃಪೆ: Focus Raghu

ಈ ಫೋಟೋಗಳನ್ನು ಕಂಡು ಅಭಿಮಾನಿಗಳು ಇಷ್ಟಪಟ್ಟಿದ್ದಾರೆ. ‘ಯಕ್ಷಗಾನದ ಸಣ್ಣ ಪ್ರಸಂಗದಲ್ಲಿ ನೀವು ನಟಿಸಬೇಕು’ ಎಂದು ಅಭಿಮಾನಿಗಳು ಮನವಿ ಮಾಡಿದ್ದಾರೆ. ಸಿನಿಮಾದಲ್ಲಿಯೂ ಇಂಥ ಪಾತ್ರ ಮಾಡಿ ಎಂದು ಕೆಲವರು ಸಲಹೆ ನೀಡಿದ್ದಾರೆ. ಫೋಟೋ ಕೃಪೆ: Focus Raghu
Published On - 11:05 am, Thu, 13 October 22
























