Ramya: ಕಲಾವಿದನ ಕುಂಚದಲ್ಲಿ ಅರಳಿದ ರಮ್ಯಾ ಭಾವಚಿತ್ರ; 35 ಅಡಿ ಎತ್ತರದ ಚಿತ್ರ ಬರೆದ ಬಾದಲ್​ ನಂಜುಂಡಸ್ವಾಮಿ

| Updated By: ಮದನ್​ ಕುಮಾರ್​

Updated on: Nov 30, 2022 | 12:08 PM

Ramya Painting | Baadal Nanjundaswamy: ಬಾದಲ್​ ನಂಜುಂಡಸ್ವಾಮಿ ಅವರ ಕುಂಚದಲ್ಲಿ ರಮ್ಯಾ ಅವರ ಕಾಲಾಕೃತಿ ಅರಳಿದೆ. 35 ಅಡಿ ಎತ್ತರ ಹಾಗೂ 15 ಅಡಿ ಅಗಲ ಇರುವ ಭಾವಚಿತ್ರವನ್ನು ಬಾದಲ್ ಬಿಡಿಸಿದ್ದಾರೆ.

ನಟಿ ರಮ್ಯಾ ದಿವ್ಯ ಸ್ಪಂದನಾ (Ramya Divya Spandana) ಅವರು ನವೆಂಬರ್​ 29ರಂದು ಹುಟ್ಟುಹಬ್ಬ ಆಚರಿಸಿಕೊಂಡರು. ಅವರ 40ನೇ ವರ್ಷದ ಜನ್ಮದಿನದ ಪ್ರಯುಕ್ತ ಅಭಿಮಾನಿಗಳು ಶುಭಾಶಯ ಕೋರಿದರು. ಕಲಾವಿದ ಬಾದಲ್​ ನಂಜುಡಸ್ವಾಮಿ (Baadal Nanjundaswamy) ಅವರು ವಿಶೇಷ ಪೇಂಟಿಂಗ್​ ರಚಿಸಿದ್ದಾರೆ. 35 ಅಡಿ ಎತ್ತರ ಹಾಗೂ 15 ಅಡಿ ಅಗಲ ಇರುವ ಭಾವಚಿತ್ರವನ್ನು ಅವರು ಬಿಡಿಸಿದ್ದಾರೆ. ಇದರ ಫೋಟೋವನ್ನು ರಮ್ಯಾ (Ramya) ಅವರು ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಹಂಚಿಕೊಂಡು ಧನ್ಯವಾದ ತಿಳಿಸಿದ್ದಾರೆ.

​ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 12:08 pm, Wed, 30 November 22

Follow us on