‘ಆಕಾಶ್’ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಬಂದ ರಮ್ಯಾ, ರಾಘಣ್ಣ: ವಿಡಿಯೋ

Updated on: Mar 13, 2026 | 1:26 PM

Akash movie re release: 2005 ರಲ್ಲಿ ಬಿಡುಗಡೆ ಆಗಿದ್ದ ಪುನೀತ್ ರಾಜ್​ಕುಮಾರ್ ನಟನೆಯ ‘ಆಕಾಶ್’ ಸಿನಿಮಾ ಇಂದು (ಮಾರ್ಚ್ 13) ಮರು ಬಿಡುಗಡೆ ಆಗಿದ್ದು, ನಟಿ ರಮ್ಯಾ ಸೇರಿದಂತೆ, ರಾಘವೇಂದ್ರ ರಾಜ್​ಕುಮಾರ್ ಇನ್ನೂ ಹಲವರು ಚಿತ್ರಮಂದಿರಕ್ಕೆ ಬಂದು ಸಿನಿಮಾ ವೀಕ್ಷಿಸಿದರು. ಪುನೀತ್ ಅಭಿಮಾನಿಗಳು ಸಹ ಅದ್ಧೂರಿಯಾಗಿ ‘ಆಕಾಶ್’ ಸಿನಿಮಾವನ್ನು ಸ್ವಾಗತಿಸಿದರು. ವಿಡಿಯೋ ನೋಡಿ...

ಪುನೀತ್ ರಾಜ್​​ಕುಮಾರ್ (Puneeth Rajkumar) ನಟನೆಯ ‘ಆಕಾಶ್’ ಸಿನಿಮಾ ಇಂದು (ಮಾರ್ಚ್ 13) ಮರು ಬಿಡುಗಡೆ ಆಗಿದೆ. 2005 ರಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾನಲ್ಲಿ ರಮ್ಯಾ ನಾಯಕಿಯಾಗಿ ನಟಿಸಿದ್ದರು. ಪುನೀತ್ ನಾಯಕನಾಗಿ ನಟಿಸಿದ ಐದನೇ ಸಿನಿಮಾ ಇದಾಗಿದ್ದು, ರಮ್ಯಾ ಜೊತೆಗೆ ನಟಿಸಿದ ಎರಡನೇ ಸಿನಿಮಾ ಆಗಿತ್ತು. ಮಹೇಶ್ ನಿರ್ದೇಶಿಸಿದ್ದ ಈ ಸಿನಿಮಾ ಬ್ಲಾಕ್ ಬಸ್ಟರ್ ಆಗಿತ್ತು. ಸಿನಿಮಾ ಇಂದು (ಮಾರ್ಚ್ 13) ಮರು ಬಿಡುಗಡೆ ಆಗಿದ್ದು, ನಟಿ ರಮ್ಯಾ ಸೇರಿದಂತೆ, ರಾಘವೇಂದ್ರ ರಾಜ್​ಕುಮಾರ್ ಇನ್ನೂ ಹಲವರು ಚಿತ್ರಮಂದಿರಕ್ಕೆ ಬಂದು ಸಿನಿಮಾ ವೀಕ್ಷಿಸಿದರು. ಪುನೀತ್ ಅಭಿಮಾನಿಗಳು ಸಹ ಅದ್ಧೂರಿಯಾಗಿ ‘ಆಕಾಶ್’ ಸಿನಿಮಾವನ್ನು ಸ್ವಾಗತಿಸಿದರು. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More