Assembly Polls: ರಾಣೆಬೆನ್ನೂರು ಮಾಜಿ ಶಾಸಕ ಆರ್ ಶಂಕರ್ ಸಹ ಮತದಾರರಿಗೆ ಕುಕ್ಕರ್ ಹಂಚುವ ಕಾರ್ಯವನ್ನು ಆರಂಭಸಿದ್ದಾರೆ!

ಅರುಣ್​ ಕುಮಾರ್​ ಬೆಳ್ಳಿ

Updated on: Jan 23, 2023 | 11:10 AM

ಮ್ಮ ರಾಜಕಾರಣಿಗಳ ಹೀಗೆ ಸ್ವಾಮಿ, ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಮಾತದಾರರ ಕುರಿತು ಅವರಲ್ಲಿ ವಿಪರೀತ ಕಾಳಜಿ ಹುಟ್ಟಿಕೊಂಡು ಬಿಡುತ್ತದೆ.

ಹಾವೇರಿ:  ಹಾವೇರಿ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿನ ಮಹಿಳಾ ಮತದಾರರಿಗೆ ಇನ್ನು ಮುಂದೆ ಅಡುಗೆ ಕೆಲಸ ಸುಲಭವಾಗಲಿದೆ, ಎಲ್ಲ 2023 ರ ರಾಜ್ಯ ವಿಧಾನ ಸಭಾ ಚುನಾವಣೆಯ ಮಹಿಮೆ ಮಾರಾಯ್ರೇ! ಬೆಳಗಾವಿ (Belagavi) ವಿಷಯ ನಾವು ಈಗಾಗಲೇ ಚರ್ಚಿಸಿದ್ದೇವೆ. ಮಾಜಿ ಸಚಿವ ಮತ್ತು ಹಾವೇರಿಯ ರಾಣೆಬೆನ್ನೂರು ಕ್ಷೇತ್ರದ ಮಾಜಿ ಶಾಸಕ ಆರ್ ಶಂಕರ್ (R Shankar) ಸಹ ಕುಕ್ಕರ್ ಪಾಲಿಟಿಕ್ಸ್ (cooker politics) ಶುರುವಿಟ್ಟುಕೊಂಡಿದ್ದಾರೆ. ಈ ವಿಡಿಯೋ ನೋಡಿ, ಅವರ ಫೋಟೋ ಮತ್ತು ಆಶ್ವಾಸನೆಗಳುಳ್ಳ ಕುಕ್ಕರ್ ಗಳು ವಿತರಣೆ ಸಿದ್ಧವಾಗಿವೆ. ನಮ್ಮ ರಾಜಕಾರಣಿಗಳ ಹೀಗೆ ಸ್ವಾಮಿ, ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಮಾತದಾರರ ಕುರಿತು ಅವರಲ್ಲಿ ವಿಪರೀತ ಕಾಳಜಿ ಹುಟ್ಟಿಕೊಂಡು ಬಿಡುತ್ತದೆ. ಇರಲಿ ಬಿಡಿ, ಅದನ್ನೆಲ್ಲ ಕೇಳೋದಕ್ಕೆ ಚುನಾವಣಾ ಆಯೋಗವಿದೆ. ಮತದಾರರು ಮಾತ್ರ ಸಿಗುವ ಗಿಫ್ಟ್ ಗಳನ್ನು ತೆಗೆದುಕೊಳ್ಳುತ್ತಾ ಹೋಗಲಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Published on: Jan 23, 2023 11:09 AM
Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.