Realme 13 Pro: ರಿಯಲ್ಮಿ ಲೇಟೆಸ್ಟ್ ಫೋನ್ ಕ್ಯಾಮೆರಾ ಡಿಎಸ್ಎಲ್ಆರ್ ರಿಸಲ್ಟ್
ಸೋನಿ ಲೆನ್ಸ್ ಹೊಂದಿರುವ ಮುಖ್ಯ ಕ್ಯಾಮೆರಾ, 5,200mAh ಬ್ಯಾಟರಿ ಮತ್ತು 80W ಫಾಸ್ಟ್ ಚಾರ್ಜಿಂಗ್ ನೂತನ ಸರಣಿಯ ವಿಶೇಷತೆಯಾಗಿದ್ದು, 13 ಪ್ರೊ ದರ ₹26,999ರಿಂದ ಆರಂಭವಾಗುತ್ತದೆ.
ಕ್ಯಾಮೆರಾ ಫೋನ್ಗಳ ನಡುವೆ ಸ್ಪರ್ಧೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ರಿಯಲ್ಮಿ 13 ಪ್ರೊ ಸರಣಿಯಲ್ಲಿ ಎರಡು ಆಕರ್ಷಕ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡಿದೆ. ರಿಯಲ್ಮಿ 13 Pro ಮತ್ತು ರಿಯಲ್ಮಿ 13 ಪ್ರೊ ಪ್ಲಸ್ ಭಾರತದ ಗ್ಯಾಜೆಟ್ ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ಸೋನಿ ಲೆನ್ಸ್ ಹೊಂದಿರುವ ಮುಖ್ಯ ಕ್ಯಾಮೆರಾ, 5,200mAh ಬ್ಯಾಟರಿ ಮತ್ತು 80W ಫಾಸ್ಟ್ ಚಾರ್ಜಿಂಗ್ ನೂತನ ಸರಣಿಯ ವಿಶೇಷತೆಯಾಗಿದ್ದು, 13 ಪ್ರೊ ದರ ₹26,999ರಿಂದ ಆರಂಭವಾಗುತ್ತದೆ. ಆಕರ್ಷಕ ಎಐ ಕ್ಯಾಮೆರಾ ನೂತನ ಸರಣಿಯ ವಿಶೇಷತೆಯಾಗಿದೆ. ಹೊಸ ಫೋನ್ ಕುರಿತು ಹೆಚ್ಚಿನ ಡೀಟೇಲ್ಸ್ ಇಲ್ಲಿದೆ.