Reliance Jio: ವಿಶ್ವದ ಅತಿ ದೊಡ್ಡ ಮೊಬೈಲ್ ಆಪರೇಟರ್ ರಿಲಯನ್ಸ್ ಜಿಯೋ

|

Updated on: Apr 26, 2024 | 7:09 AM

ರಿಲಯನ್ಸ್ ಜಿಯೋ ಡೇಟಾ ಟ್ರಾಫಿಕ್​ನಲ್ಲಿ ವಿಶ್ವದ ನಂಬರ್ ಒನ್ ಕಂಪನಿಯಾಗಿ ಹೊರಹೊಮ್ಮಿದೆ. ಕಳೆದ ತ್ರೈಮಾಸಿಕದಲ್ಲಿ ಒಟ್ಟು ಡೇಟಾ ದಟ್ಟಣೆಯು 40.9 ಎಕ್ಸಾಬೈಟ್‌ಗಳಲ್ಲಿ ದಾಖಲಾಗಿದೆ. ಅದೇ ಅವಧಿಯಲ್ಲಿ ಡೇಟಾ ಟ್ರಾಫಿಕ್‌ನಲ್ಲಿ ಇದುವರೆಗೆ ನಂಬರ್ ಒನ್ ಕಂಪನಿಯಾಗಿದ್ದ ಚೀನಾ ಮೊಬೈಲ್ ಎರಡನೇ ಸ್ಥಾನಕ್ಕೆ ಕುಸಿದಿದೆ.

ದೇಶದ ಖಾಸಗಿ ಟೆಲಿಕಾಂ ವಲಯದ ಪ್ರಮುಖ ಉದ್ಯಮ ರಿಲಯನ್ಸ್ ಜಿಯೋ ಈಗ ಡೇಟಾ ಬಳಕೆಯಲ್ಲಿ ಹೊಸ ದಾಖಲೆ ನಿರ್ಮಿಸಿದೆ. ರಿಲಯನ್ಸ್ ಜಿಯೋ ಡೇಟಾ ಟ್ರಾಫಿಕ್​ನಲ್ಲಿ ವಿಶ್ವದ ನಂಬರ್ ಒನ್ ಕಂಪನಿಯಾಗಿ ಹೊರಹೊಮ್ಮಿದೆ. ಕಳೆದ ತ್ರೈಮಾಸಿಕದಲ್ಲಿ ಒಟ್ಟು ಡೇಟಾ ದಟ್ಟಣೆಯು 40.9 ಎಕ್ಸಾಬೈಟ್‌ಗಳಲ್ಲಿ ದಾಖಲಾಗಿದೆ. ಅದೇ ಅವಧಿಯಲ್ಲಿ ಡೇಟಾ ಟ್ರಾಫಿಕ್‌ನಲ್ಲಿ ಇದುವರೆಗೆ ನಂಬರ್ ಒನ್ ಕಂಪನಿಯಾಗಿದ್ದ ಚೀನಾ ಮೊಬೈಲ್ ಎರಡನೇ ಸ್ಥಾನಕ್ಕೆ ಕುಸಿದಿದೆ. ಭಾರತ ಮೂಲದ ಮತ್ತೊಂದು ಕಂಪನಿ ಏರ್​ಟೆಲ್, ಜಾಗತಿಕವಾಗಿ ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ಈ ಮೂಲಕ ದೇಶದಲ್ಲಾಗಿರುವ 5G ಕ್ರಾಂತಿಯಿಂದಾಗಿ ಸರಾಸರಿ ಡೇಟಾ ಬಳಕೆಯಲ್ಲಿ ಹೆಚ್ಚಳ ಕಂಡುಬಂದಿದೆ.