Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಾಮರಾಜನಗರದಲ್ಲಿ ಗಮನ ಸೆಳೆಯುತ್ತಿದೆ ಸಾಂಪ್ರದಾಯಿಕ ಮತಗಟ್ಟೆ

ಚಾಮರಾಜನಗರದಲ್ಲಿ ಗಮನ ಸೆಳೆಯುತ್ತಿದೆ ಸಾಂಪ್ರದಾಯಿಕ ಮತಗಟ್ಟೆ

ಸೂರಜ್ ಪ್ರಸಾದ್ ಎಸ್.ಎನ್
| Updated By: ಕಿರಣ್ ಹನುಮಂತ್​ ಮಾದಾರ್

Updated on: Apr 25, 2024 | 9:20 PM

ಲೋಕಸಭಾ ಚುನಾವಣೆ(Lok Sabha election) ಕಣ ರಂಗೇರಿದ್ದು, ಅದರಂತೆ ನಾಳೆ(ಏ.26) ರಾಜ್ಯದ 14 ಜಿಲ್ಲೆಗಳಲ್ಲಿ ಮೊದಲ ಹಂತದ ಮತದಾನ ನಡೆಯಲಿದೆ. ಈ ಬಾರಿ ಕೂಡ ಲೋಕಸಭಾ ಚುನಾವಣೆಯಲ್ಲಿ ಮತದಾನದ ಕುರಿತು ಸಾರ್ವಜನಿಕರಲ್ಲಿ ಮತದಾನ ಜಾಗೃತಿ ಮೂಡಿಸಲಾಗಿದ್ದು, ಅದರಂತೆ ಚಾಮರಾಜನಗರ (Chamarajanagar) ಜಿಲ್ಲಾಡಳಿತವೂ ಹೊಸದೊಂದು ಪ್ರಯತ್ನಕ್ಕೆ ಮುಂದಾಗಿದೆ. ಹೌದು, ಸಾಂಪ್ರದಾಯಿಕ ಮತಗಟ್ಟೆ ನಿರ್ಮಿಸುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದೆ.

ಚಾಮರಾಜನಗರ, ಏ.25: ಲೋಕಸಭಾ ಚುನಾವಣೆ(Lok Sabha election) ಕಣ ರಂಗೇರಿದ್ದು, ಅದರಂತೆ ನಾಳೆ(ಏ.26) ರಾಜ್ಯದ 14 ಜಿಲ್ಲೆಗಳಲ್ಲಿ ಮೊದಲ ಹಂತದ ಮತದಾನ ನಡೆಯಲಿದೆ. ಈ ಬಾರಿ ಕೂಡ ಲೋಕಸಭಾ ಚುನಾವಣೆಯಲ್ಲಿ ಮತದಾನದ ಕುರಿತು ಸಾರ್ವಜನಿಕರಲ್ಲಿ ಮತದಾನ ಜಾಗೃತಿ ಮೂಡಿಸಲಾಗಿದ್ದು, ಅದರಂತೆ ಚಾಮರಾಜನಗರ (Chamarajanagar) ಜಿಲ್ಲಾಡಳಿತವೂ ಹೊಸದೊಂದು ಪ್ರಯತ್ನಕ್ಕೆ ಮುಂದಾಗಿದೆ. ಹೌದು, ಸಾಂಪ್ರದಾಯಿಕ ಮತಗಟ್ಟೆ ನಿರ್ಮಿಸುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದೆ.

ಚಾಮರಾಜನಗರ ಜಿಲ್ಲೆಯ ಸಂಸ್ಕೃತಿ ಹಾಗೂ ಜಾನಪದ ಕಲೆಗಳ ಮಹತ್ವವನ್ನು ಸಾರುವ ಮತಗಟ್ಟೆಯನ್ನು ನಿರ್ಮಾಣ ಮಾಡಲಾಗಿದೆ. ಜಿಲ್ಲೆಯ ರಾಮಸಮುದ್ರದ ಬಾಲರಪಟ್ಟಣ ಶಾಲೆಯಲ್ಲಿ ಈ ಮತಗಟ್ಟೆ ಸ್ಥಾಪಿಸಿದ್ದು, ಜಾನಪದ ಕಲೆಗಳ ಅನಾವರಣ ಮಾಡಲಾಗಿದೆ. ಇಲ್ಲಿ ತಂಬೂರಿ, ಡಮರುಗ, ತಬಲ ಮೊದಲಾದ ಸಂಗೀತ ಉಪಕರಣಗಳ ಪ್ರದರ್ಶನವನ್ನು ಏರ್ಪಡಿಸಿ, ಮತದಾನದ ಪ್ರಮಾಣವನ್ನು ಹೆಚ್ಚಿಸಲು ಜಿಲ್ಲಾಡಳಿತ ಕ್ರಮ ಕೈಗೊಂಡಿರುವುದು ವಿಶೇಷವಾಗಿದೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ