Dr CN Manjunath: ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಅವರ ನಿವಾಸದಲ್ಲಿ ಭೇಟಿಯಾದ ಹೃದ್ರೋಗ ತಜ್ಞ ಡಾ ಸಿಎನ್ ಮಂಜುನಾಥ್

ಅರುಣ್​ ಕುಮಾರ್​ ಬೆಳ್ಳಿ

Updated on: May 30, 2023 | 2:01 PM

ಬೈಕ್ ಮೇಲೆ ಕಾಲು ಅಲ್ಲಾಡಿಸುತ್ತಾ ಪೋನಲ್ಲಿ ಮಾತಾಡುತ್ತಾ ಕೂತ ಪೊಲೀಸ್, ಡಾ ಮಂಜುನಾಥ್ ಅವರನ್ನು ನೋಡಿಯೂ ಎದ್ದು ನಿಲ್ಲುವ ಸೌಜನ್ಯತೆ ತೋರುವುದಿಲ್ಲ!

ಬೆಂಗಳೂರು: ನಾಡಿನ ಖ್ಯಾತ ಹೃದ್ರೋಗ ತಜ್ಞ, ಜಯದೇವ ಹೃದಯರಕ್ತನಾಳ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಹಾಗೂ ಮಾಜಿ ಪ್ರಧಾನ ಮಂತ್ರಿ ಹೆಚ್ ಡಿ ದೇವೇಗೌಡರ ಅಳಿಯ ಡಾ ಸಿ ಎನ್ ಮಂಜುನಾಥ್ (Dr CN Manjunath) ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು (Siddaramaiah) ಅವರ ಅಧಿಕೃತ ನಿವಾಸದಲ್ಲಿ ಭೇಟಿಯಾದರು. ಅವರು ಮುಖ್ಯಮಂತ್ರಿಗಳ ನಿವಾಸದ ಬಳಿ ಆಗಮಿಸುತ್ತಿದ್ದಂತೆ ಅಲ್ಲಿದ್ದ ಪೊಲೀಸರು ಮತ್ತು ಜನರು ಅವರನ್ನು ಗೌರವಪೂರ್ವಕವಾಗಿ ವಂದಿಸುತ್ತಾರೆ (greet) ಮತ್ತು ಡಾಕ್ಟರ್ ಸಹ ಅವರೊಂದಿಗೆ ಆತ್ಮೀಯವಾಗಿ ಮಾತಾಡುತ್ತಾರೆ. ನಾಡಿನ ಜನತೆಗೆ ಅವರು ಚಿರಪರಿಚಿತರು ಅನ್ನೋದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ, ಈ ಟ್ರಾಫಿಕ್ ಪೊಲೀಸಪ್ಪಗೆ ಡಾ ಮಂಜುನಾಥ್ ಬಗ್ಗೆ ಗೊತ್ತಿದ್ದಂತಿಲ್ಲ. ಸಿದ್ದರಾಮಯ್ಯರ ಜೊತೆ ಮಾತುಕತೆ ನಡೆಸಿ ವೈದ್ಯರು ತಮ್ಮ ಕಾರಿನೆಡೆ ವಾಪಸ್ಸು ನಡೆದುಹೋಗುವಾಗ ಮರವೊಂದರ ನೆರಳಲ್ಲಿ ಬೈಕ್ ಮೇಲೆ ಕಾಲು ಅಲ್ಲಾಡಿಸುತ್ತಾ ಪೋನಲ್ಲಿ ಮಾತಾಡುತ್ತಾ ಕೂತ ಪೊಲೀಸ್, ಡಾ ಮಂಜುನಾಥ್ ಅವರನ್ನು ನೋಡಿಯೂ ಎದ್ದು ನಿಲ್ಲುವ ಸೌಜನ್ಯತೆ ತೋರುವುದಿಲ್ಲ!

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.