ಸಾಧಕರನ್ನು ಪತ್ತೆ ಹಚ್ಚಿ ಸನ್ಮಾನ ಮಾಡುವ ಕಾರ್ಯಕ್ರಮ ನಿಜವಾಗಿಯೂ ಅನನ್ಯವಾದುದು: ಡಾ ಸಿಎನ್ ಮಂಜುನಾಥ್

ಯಾವುದೇ ಒಂದು ಕ್ಷೇತ್ರದಲ್ಲಿ ನಾವು ಸಾಧನೆ ಮಾಡಬೇಕಾದರೆ ನಿರಂತರವಾದ ಪ್ರಯತ್ನ ಬಹಳ ಮುಖ್ಯ. ನಿಜವಾಗಿಯೂ ಇದೊಂದು ಉತ್ತಮ ಕಾರ್ಯಕ್ರಮ.

ಸಾಧಕರನ್ನು ಪತ್ತೆ ಹಚ್ಚಿ ಸನ್ಮಾನ ಮಾಡುವ  ಕಾರ್ಯಕ್ರಮ ನಿಜವಾಗಿಯೂ ಅನನ್ಯವಾದುದು: ಡಾ ಸಿಎನ್ ಮಂಜುನಾಥ್
ಡಾ.ಸಿಎನ್ ಮಂಜುನಾಥ್
Follow us
| Updated By: ರಶ್ಮಿ ಕಲ್ಲಕಟ್ಟ

Updated on:Jan 04, 2022 | 6:36 PM

ಟಿವಿ9 ಕಳೆದ 15 ವರ್ಷಗಳಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಪತ್ತೆ ಹಚ್ಚಿ ಸನ್ಮಾನ ಮಾಡುವ ಕಾರ್ಯಕ್ರಮ ನಿಜವಾಗಿಯೂ ಅನನ್ಯವಾದುದು ಮತ್ತು ಅರ್ಥ ಪೂರ್ಣವಾದುದು. ಯಾಕೆಂದರೆ ಈ ಸಾಧಕರನ್ನು ನಾನು ಸಮಾಜಕ್ಕೆ ಪರಿಚಯ ಮಾಡುವ ಮೂಲಕ ಸಾಧಕರಿಗೆ ನಾವು ಪ್ರೇರಣೆ ಕೊಡುತ್ತಿದ್ದೇವೆ , ಪ್ರೋತ್ಸಾಹ ಕೊಡುತ್ತಿದ್ದೇವೆ. ಹಾಗೆಯೇ ಲಕ್ಷಾಂತರ ಜನರಿಗೆ ಇನ್ನೂ ಒಳ್ಳೆಯ ಕೆಲಸ ಮಾಡಬೇಕೆಂಬ ಪ್ರೇರಣೆ ಸಿಗುತ್ತದೆ. ಇದು ಬಹಳ ಒಳ್ಳೇ ಕಾರ್ಯಕ್ರಮ ಸಮಾಜಮುಖಿ ಕಾರ್ಯಕ್ರಮ ಎಂದು ನಮ್ಮ ಭಾವನೆ. ಯಾಕೆಂದರೆ ಇವತ್ತು ಹಲವಾರು ಸಾಧಕರು ಬೇರೆಯವರಿಗೆ ಗೊತ್ತಿಲ್ಲದೆ ತೆರೆಮರೆಯಲ್ಲಿ ಕೆಲಸ ಮಾಡಿಕೊಂಡು  ಹೋಗುತ್ತಿದ್ದಾರೆ. ಅಂಥವರನ್ನು ನಾವು ಪತ್ತೆ ಹಚ್ಚಿ ಇಂಥಾ ದೊಡ್ಡ ಸ್ಟೇಜ್​​ನಲ್ಲಿ ಸಮಾಜಕ್ಕೆ ಪರಿಚಯ ಮಾಡಿಸಿದರೆ ನಿಜವಾಗಿಯೂ ಅವರಿಗೂ ನಾನು ಇನ್ನೂ ಹೆಚ್ಚು ಹೆಚ್ಚು ಕೆಲಸವನ್ನು ಮಾಡಬೇಕು ,ಸಮಾಜ ಸೇವೆ ಮಾಡಬೇಕು. ಯಾವುದೇ ಒಂದು ಕ್ಷೇತ್ರದಲ್ಲಿ ನಾವು ಸಾಧನೆ ಮಾಡಬೇಕಾದರೆ ನಿರಂತರವಾದ ಪ್ರಯತ್ನ ಬಹಳ ಮುಖ್ಯ. ನಿಜವಾಗಿಯೂ ಇದೊಂದು ಉತ್ತಮ ಕಾರ್ಯಕ್ರಮ ಎಂದು ಟಿವಿ9 ನವನಕ್ಷತ್ರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಜಯದೇವ ಆಸ್ಪತ್ರೆಯ ನಿರ್ದೇಶಕ   ಡಾ ಸಿಎನ್ ಮಂಜುನಾಥ್ (Dr CN Manjunath) ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಕೊರೊನಾವೈರಸ್ ಮೂರನೇ ಅಲೆ ಬಗ್ಗೆ ಮಾತನಾಡಿದ ಅವರು ಡಿಸೆಂಬರ್​​ನಿಂದ ಫೆಬ್ರವರಿ ತಿಂಗಳ ಏನಿದೆ ತುಂಬಾ ಮುಖ್ಯ. ಮೊದಲನೇ ಅಲೆ ಪ್ರಾರಂಭವಾಗಿದ್ದು ಜನವರಿಯಲ್ಲೇ ಎರಡನೇ ಅಲೆ ಕೂಡಾ ಪ್ರಾರಂಭವಾಗಿದ್ದು ಫೆಬ್ರವರಿಯಲ್ಲಿ. ಅದರಿಂದ ಇವತ್ತು ಒಮಿಕ್ರಾನ್ ರೂಪಾಂತರ ವೈರಸ್ ಬಂದಿರ ತಕ್ಕಂತ ಹಿನ್ನೆಲೆಯಲ್ಲಿ ಮುಂದಿನ 90 ದಿನ ಬಹಳ ಮುಖ್ಯ. ಯಾಕೆಂದರೆ ನಾವು ವ್ಯಾಕ್ಸಿನ್ ತಗೊಂಡಿದ್ದೀವಿ ನಮಗೆ ಏನೂ ಆಗಲ್ಲ ಎಂಬ ಭ್ರಮೆಯಲ್ಲಿದ್ದಾರೆ. ವ್ಯಾಕ್ಸಿನ್ ತಗೊಳ್ಳುವ ಉದ್ದೇಶ ಅದು ತೀವ್ರತೆ ಕಡಿಮೆ ಮಾಡುತ್ತೇ ಹೊರತು ಹೊಸದಾಗಿ ಬರುವ ಸೋಂಕನ್ನು ತಡೆಗಟ್ಟುವುದಿಲ್ಲ. ಆದ್ದರಿಂದ ವ್ಯಾಕ್ಸಿನ್ ತೆಗೆದುಕೊಂಡಿದ್ದರೂ ಕೂಡಾ ಮಾಸ್ಕ್ ಹಾಕೋಬೇಕಾಗುತ್ತೆ ಆದಷ್ಟು ಒಳಾಂಗಣದಲ್ಲಿ ಎಲ್ಲಿ ಸಣ್ಣ ಸಣ್ಣ ಇಂಡೋರ್ ಆಕ್ಟಿವಿಟೀಸ್ ಏನಿದೆ ಅಲ್ಲಿ ವೆಂಟಿಲೇಷನ್ ಇರಬೇಕು.ಏರ್ ಸರ್ಕುಲೇಷನ್ ಚೆನ್ನಾಗಿರಬೇಕು. ಅದು ಇಲ್ಲದೇ ಇದ್ದರೆ ಬಹಳ ಸಮಸ್ಯೆ ಆಗುತ್ತದೆ. ಈಗಾಗಲೇ ಬ್ರಿಟನ್, ಇಂಗ್ಲೆಂಡ್ ನಲ್ಲಿ ಕಳೆದ ಎರಡು ದಿನದಿಂದ ನಿರಂತರವಾಗಿ ಒಂದೇ ದಿನ 70-85 ಸಾವಿರ ಹೊಸ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಭಾರತ ಕೂಡಾ ಮುನ್ನೆಚ್ಚರಿಕೆಯಲ್ಲಿರಬೇಕಾಗುತ್ತದೆ.  ವ್ಯಾಕ್ಸಿನೇಷನ್ ಮತ್ತು ವೆಂಟಿಲೇಷನ್ ಬಹಳ ಮುಖ್ಯ ಎಂದು ಹೇಳಿದ್ದಾರೆ.

ಇದನ್ನೂ ಓದಿ:  ಶ್ರದ್ಧೆಯನ್ನು ಗುರುತಿಸಿದ್ದಕ್ಕೆ ತುಂಬಾ ಸಂತೋಷ: ಇಸ್ರೊ ವಿಜ್ಞಾನಿ ರೂಪಾ ಎಂವಿ

Published On - 6:33 pm, Tue, 4 January 22

‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ