ಶ್ರದ್ಧೆಯನ್ನು ಗುರುತಿಸಿದ್ದಕ್ಕೆ ತುಂಬಾ ಸಂತೋಷ: ಇಸ್ರೊ ವಿಜ್ಞಾನಿ ರೂಪಾ ಎಂವಿ
ಟಿವಿ9 ನಿಜ ಹೇಳಬೇಕೂ ಅಂದ್ರೆ ಒಂದು ಲೀಡಿಂಗ್ ಚಾನೆಲ್ ಆಗಿ ಹೊರಹೊಮ್ಮಿದೆ. ನಾವು ಸುಮಾರು 10 -15 ವರ್ಷಗಳಿಂದ ಅದನ್ನು ನೋಡ್ತಾ ಇದ್ದೀವಿ. ಬಹಳ ಒಳ್ಳೆಯ ಚಾನೆಲ್ . ಹಾಗಾಗಿ ಈ ಚಾನೆಲ್ನವರು ಅವಾರ್ಡ್ ಕೊಟ್ಟಿರುವುದು ನನಗೆ ಹೆಮ್ಮೆ ಅನಿಸ್ತಿದೆ.
ಸಾಧನೆ ಅನ್ನೋದಕ್ಕಿಂತ ಇಸ್ರೊದಲ್ಲಿ(ISRO) ಪುರುಷರು ಮಹಿಳೆಯರು ಎಲ್ಲರೂ ಒಟ್ಟಿಗೆ ಸೇರಿ ಕೆಲಸ ಮಾಡುತ್ತಿದ್ದೀವಿ. ಟೀಂ ವರ್ಕ್ ಅದು. ಅದರಲ್ಲಿ ನಾನು ಸ್ಪೇಸ್ ಆಪರೇಷನ್ ಡಿವಿಷನ್ನಲ್ಲಿದ್ದೆ ಕಂಟ್ರೋಲರ್ ಆಗಿ ನನ್ನ ಅನುಭವದಿಂದ ನಾನು ತಂಡವನ್ನು ಮುನ್ನಡೆಸುತ್ತಿದ್ದೆ. Oceansat-2 ನಾನು ಮ್ಯಾನೇಜರ್ ಆಗಿ ತಂಡವನ್ನು ಲೀಡ್ ಮಾಡಿದ್ದು. ಅದಾದ ನಂತರ ನನ್ನ ಎಕ್ಸ್ಪೀರಿಯನ್ಸ್ ನಿಂದ ನನಗೆ ಒಳ್ಳೊಳ್ಳೆ ಪ್ರಾಜೆಕ್ಟ್ ಗಳನ್ನು ಆಪರೇಷನ್ ಡೈರೆಕ್ಟರ್ ಆಗಿ ಲೀಡ್ ಮಾಡುವಂತ ಅವಕಾಶ ಸಿಕ್ಕಿತು. ನನಗೆ ಕೊಟ್ಟಂತ ಜವಾಬ್ದಾರಿಯನ್ನು ನಾನು ಶ್ರದ್ಧೆಯಿಂದ ಮಾಡ್ತಾ ಇದ್ದೀನಿ. ಹಾಗಾಗಿ ಇಸ್ರೊ ಅದನ್ನು ಪರಿಗಣಿಸಿ ನನಗೆ ದೊಡ್ಡ ದೊಡ್ಡ ಜವಾಬ್ದಾರಿಯನ್ನು ಕೊಟ್ಟಿದ್ದಕ್ಕೆ ಹೆಮ್ಮೆಯಾಗುತ್ತಿದೆ. ಟಿವಿ 9 ಸುದ್ದಿ ವಾಹಿನಿ ಪ್ರಾರಂಭವಾಗಿ 15 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ನವನಕ್ಷತ್ರ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನಿತರಾದ ಇಸ್ರೊ ವಿಜ್ಞಾನಿ ರೂಪಾ ಎಂ.ವಿ (Roopa MV) ಈ ಮಾತುಗಳನ್ನು ಹೇಳಿದ್ದಾರೆ.
ಖುಷಿಯಾಗುತ್ತಿದೆ ಟಿವಿ9 ನಮ್ಮ ಸಾಧನೆಯನ್ನು ಗುರುತಿಸಿದ್ದಕ್ಕೆ. ಇಸ್ರೊ ತಂಡ ಬಹಳಷ್ಟು ಸಾಧನೆಗಳನ್ನು ಮಾಡಿದೆ. ಎರಡೂ ಚಂದ್ರಯಾನ ಸಫಲತೆಯನ್ನು ಕಂಡಿದೆ. ಮಂಗಳಯಾನ ಬಹಳ ಸಫಲತೆಯನ್ನೇ ಕಂಡಿದೆ. ಚಂದ್ರಯಾನ -2 ಮತ್ತು ಮಂಗಳಯಾನದಲ್ಲಿ ನಾನು ಇಡೀ ಪ್ರಾಜೆಕ್ಟ್ ನ್ನು ಕಂಟ್ರೋಲ್ ಮಾಡುವ ಜವಾಬ್ದಾರಿಯನ್ನು ತೆಗೆದುಕೊಂಡಿದ್ದೆ. ಅದರಲ್ಲಿಯೂ ಮಂಗಳಯಾನ ಖುಷಿ ಕೊಡುವಂತ ಪ್ರಾಜೆಕ್ಟ್ ಅದು. 6 ತಿಂಗಳಿಗಾಗಿ ಮಾಡಿದ ಪ್ರಾಜೆಕ್ಟ್ ಅದು, 8 ವರ್ಷಗಳಾದರೂ ಅದು ಚೆನ್ನಾಗಿ ಓಡ್ತಾ ಇದೆ. ಇಸ್ರೊ ಅದೊಂದು ತಂಡದ ಸಾಧನೆ. ನನ್ನ ವೈಯಕ್ತಿಕ ಸಾಧನೆ ಎಂದು ಹೇಳುವುದಕ್ಕಿಂತ ನನಗೆ ಕೊಟ್ಟ ಯಾವುದೇ ಜವಾಬ್ದಾರಿಯನ್ನು ಶ್ರದ್ಧೆಯಿಂದ ಮಾಡ್ತಾ ಇದ್ದೆ. ಆ ಶ್ರದ್ಧೆಯನ್ನು ಗುರುತಿಸಿದ್ದಕ್ಕೆ ತುಂಬಾ ಸಂತೋಷ ಆಗಿದೆ.
ನಿಜವಾಗಿಯೂ ಪ್ರಶಸ್ತಿ ಸಿಗುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ. ನನಗೆ ಗೊತ್ತಿರುವುದೊಂದೇ ಯಾವುದೇ ಜವಾಬ್ದಾರಿ ಕೊಟ್ಟರೂ ಇಸ್ರೊದವರು ಕೊಟ್ಟಾಗ ಅದನ್ನು ಶ್ರದ್ಧೆಯಿಂದ ಮಾಡಬೇಕು ಅನ್ನುವುದು. ಶ್ರದ್ಧೆಯಿಂದ ಮಾಡಿದ್ದಕ್ಕೆ ಟಿವಿ9 ನವರು ನನ್ನನ್ನು ಗುರುತಿಸಿದ್ದು ನಿಜವಾಗಿಲೂ ನನಗೆ ಹೆಮ್ಮೆ. ಟಿವಿ9 ನಿಜ ಹೇಳಬೇಕೂ ಅಂದ್ರೆ ಒಂದು ಲೀಡಿಂಗ್ ಚಾನೆಲ್ ಆಗಿ ಹೊರಹೊಮ್ಮಿದೆ. ನಾವು ಸುಮಾರು 10 -15 ವರ್ಷಗಳಿಂದ ಅದನ್ನು ನೋಡ್ತಾ ಇದ್ದೀವಿ. ಬಹಳ ಒಳ್ಳೆಯ ಚಾನೆಲ್ . ಹಾಗಾಗಿ ಈ ಚಾನೆಲ್ನವರು ಅವಾರ್ಡ್ ಕೊಟ್ಟಿರುವುದು ನನಗೆ ಹೆಮ್ಮೆ ಅನಿಸ್ತಿದೆ.
ನಾವು ಯಾವುದೇ ಸಂಗತಿಯನ್ನು ಕ್ಯೂರಿಯಾಸಿಟಿಯಿಂದ ನೋಡಬೇಕು. ಸಣ್ಣ ವಿಷ್ಯ ಆಗಿರಬಹುದು ಅದನ್ನು ಸ್ಟೂಡೆಂಟ್ಸ್ ಕ್ಯೂರಿಯಾಸಿಟಿಯಿಂದ ನೋಡಬೇಕು. ಹಾಗಿದ್ದರೆ ಅದರ ಹಿಂದಿನ ವಿಜ್ಞಾನವನ್ನು ಅದು ಆಟವಿರಬಹುದು,ಸಂಗೀತ ಇರಬಹುದು, ಅದರ ಹಿಂದಿರುವ ಮೂಲವನ್ನು, ವಿಜ್ಞಾನವನ್ನು ಅವರು ಅರ್ಥ ಮಾಡಿಕೊಂಡರೆ ಅವರು ಮೇಲೆ ಬರುತ್ತಾರೆ.ಶ್ರದ್ಧೆ ಇಟ್ಟು ಕಲಿತರೆ ಖಂಡಿತಾ ಅವರು ಮುಂದೆ ಬರುತ್ತಾರೆ ನಾವು ಮುಂದೆ ಚಂದ್ರಯಾನ 3 ಪ್ರಾಜೆಕ್ಟ್ ನಲ್ಲಿ ಗ್ರೌಂಡ್ ಸೆಗ್ಮೆಂಟ್ ಜವಾಬ್ದಾರಿ ಹೊಂದಿದ್ದೀನಿ. ಮುಂದೆ ಅದರಲ್ಲಿ ಕೆಲಸ ಮಾಡುತ್ತೀನಿ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸಾಧಕರನ್ನು ಗುರುತಿಸಿ ಸನ್ಮಾನ ಮಾಡುತ್ತಿರುವ ಟಿವಿ 9 ಎಲ್ಲರಿಗೂ ಮಾದರಿ: ಸಂಗೀತ ನಿರ್ದೇಶಕ ಚರಣ್ ರಾಜ್
Published On - 6:18 pm, Tue, 4 January 22