ತುಮಕೂರು: ರಂಪಾಟ ನಡೆಸಿದ ನಿವೃತ್ತ ಪ್ರಾಂಶುಪಾಲಾರಿಗೆ ಸಾರ್ವಜನಿಕರಿಂದ ಥಳಿತ
ಬೈಕ್ ನಿಲ್ಲಿಸುವ ವಿಚಾರದಲ್ಲಿ ರಂಪಾಟ ನಡೆಸಿದ ನಿವೃತ್ತ ಪ್ರಾಂಶುಪಾಲರಿಗೆ ಸಾರ್ವಜನಿಕರು ಥಳಿಸಿದ ಘಟನೆ ತುಮಕೂರು ಜಿಲ್ಲೆಯ ತಿಪಟೂರಿನ ಹಾಸನ ವೃತ್ತದಲ್ಲಿ ನಡೆದಿದೆ. ಸಾರ್ವಜನಿಕರ ಆಕ್ರೋಶಕ್ಕೆ ನಿವೃತ್ತ ಪ್ರಿನ್ಸಿಪಾಲ್ ಸ್ಥಳದಿಂದ ಓಡಿ ಹೋದರು.
ತುಮಕೂರು: ಬೈಕ್ ನಿಲ್ಲಿಸುವ ವಿಚಾರದಲ್ಲಿ ರಂಪಾಟ ನಡೆಸಿದ ನಿವೃತ್ತ ಪ್ರಾಂಶುಪಾಲರಿಗೆ ಸಾರ್ವಜನಿಕರು ಥಳಿಸಿದ ಘಟನೆ ತುಮಕೂರು (Tumkur) ಜಿಲ್ಲೆಯ ತಿಪಟೂರಿನ ಹಾಸನ ವೃತ್ತದಲ್ಲಿ ನಡೆದಿದೆ. ಎಸ್ಬಿಐ ಬ್ಯಾಂಕ್ ಬಳಿ ತಿಪಟೂರಿನ ಕಲ್ಪತರು ಕಾಲೇಜಿನ ನಿವೃತ್ತ ಪ್ರಾಂಶುಪಾಕರ ಶಿರೂರ್ ರಂಪಾಟ ನಡೆಸಿದ್ದು, ಅನಾವಶ್ಯಕವಾಗಿ ಅವಾಶ್ಚ್ಯ ಪದಗಳಿಂದ ಸಾರ್ವಜನಿಕರ ನಿಂದಿಸಿದ್ದಾರೆ. ಇದರಿಂದಾಗಿ ರೊಚ್ಚಿಗೆದ್ದ ಸಾರ್ವಜನಿಕರು ಪ್ರಶ್ನಿಸಿ ಥಳಿಸಿದ್ದಾರೆ. ಭೀತಿಗೊಂಡ ಶಿರೂರ್ ಎಸ್ಬಿಐ ಬ್ಯಾಂಕ್ ಒಳಗೆ ಓಡಿದರಲ್ಲದೆ, ನಂತರ ಸ್ಥಳದಿಂದಲೇ ಓಡಿಹೋದರು. ಘಟನೆಯ ದೃಶ್ಯವನ್ನು ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆ ಹಿಡಿಯಲಾಗಿದೆ.
ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ