Gruha Jyothi scheme: ಗೃಹಜ್ಯೋತಿ ಗ್ಯಾರಂಟಿಗೆ ಸಂಬಂಧಿಸಿದಂತೆ ಪತ್ರಿಕಾ ಗೋಷ್ಟಿಯಲ್ಲಿ ಜನರ ಗೊಂದಲ ನಿವಾರಿಸಲು ಪ್ರಯತ್ನಿಸಿದ ಸಚಿವ ಕೆಜೆ ಜಾರ್ಜ್
ವಿದ್ಯುತ್ ದರ ಪ್ರತಿ ಯೂನಿಟ್ ಗೆ ರೂ. 0.70 ಹೆಚ್ಚಾಗಿರುವುದು ಹಿಂದಿನ ಸರ್ಕಾರದ ಅವಧಿಯಲ್ಲಿ ಎಂದು ಜಾರ್ಜ್ ಹೇಳಿದರು.
ಬೆಂಗಳೂರು: ಕಳೆದ ವಾರ ಭರವಸೆ ನೀಡಿದ ಹಾಗೆ ಇಂಧನ ಸಚಿವ ಕೆಜೆ ಜಾರ್ಜ್ (KJ George) ಇಂದು ಸುದ್ದಿಗೋಷ್ಟಿ ನಡೆಸಿ ಗೃಹಜ್ಯೋತಿ ಸ್ಕೀಮ್ (Gruha Jyoti scheme) ಕುರಿತಾಗಿ ಜನರಲ್ಲಿರುವ ಗೊಂದಲಗಳನ್ನು ನಿವಾರಿಸುವ ಪ್ರಯತ್ನ ಮಾಡಿದರು. ಯಾವುದೇ ಕುಟುಂಬ ತಿಂಗಳೊಂದರಲ್ಲಿ 200 ಕ್ಕಿಂತ ಜಾಸ್ತಿ ಯೂನಿಟ್ ವಿದ್ಯುತ್ ಬಳಸಿದರೆ ಪೂರ್ತಿ ಬಿಲ್ ಕಟ್ಟಬೇಕಾಗುತ್ತದೆ ಎಂದು ಹೇಳಿದರು. ಕುಟುಂಬವೊಂದು ವಾರ್ಷಿಕ ಸರಾಸರಿ 53 ಯೂನಿಟ್ ಬಳಸುತ್ತಿದ್ದರೆ ಅದಕ್ಕೆ 10 ಯೂನಿಟ್ ಹೆಚ್ಚುವರಿ ಬೋನಸ್ ನೀಡಲಾಗುತ್ತದೆ ಮತ್ತು ಆ ಕುಟುಂಬ 53+ 5.3 ಯೂನಿಟ್ ಗಿಂತ ಜಾಸ್ತಿ ಮತ್ತು 200 ಯೂನಿಟ್ ಗಳಿಗಿಂತ ಕಡಿಮೆ ವಿದ್ಯುತ್ ಬಳಸಿದ್ದರೆ ಹೆಚ್ಚುವರಿಯಾಗಿ ಬಳಕೆ ಮಾಡಿದ ಯೂನಿಟ್ ಗಳಿಗೆ ಮಾತ್ರ ಬಿಲ್ ಪಾವತಿಸಬೇಕೆಂದು ಸಚಿವರು ಹೇಳಿದರು. ವಿದ್ಯುತ್ ದರ ಪ್ರತಿ ಯೂನಿಟ್ ಗೆ ರೂ. 0.70 ಹೆಚ್ಚಾಗಿರುವುದು ಹಿಂದಿನ ಸರ್ಕಾರದ ಅವಧಿಯಲ್ಲಿ ಎಂದು ಜಾರ್ಜ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos