Biparjoy Cyclone: ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಬೀಪರ್ ಜಾಯ್ ಸೈಕ್ಲೋನ್ ಅಬ್ಬರ, ಧರೆಗುರುಳುತ್ತಿರುವ ಮರಗಿಡ ಮತ್ತು ಮನೆಗಳು!
ತೀರದಲ್ಲಿದ್ದ ಕೆಲ ಮನೆಗಳು ಸಹ ಕಡಲ್ಕೊರೆತದಿಂದಾಗಿ ಕುಸಿದು ಬಿದ್ದಿದ್ದು ಅವುಗಳಲ್ಲಿ ವಾಸವಾಗಿದ್ದ ಜನ ನೆರವಿಗಾಗಿ ಸರ್ಕಾರಕ್ಕೆ ಮೊರೆಯಿಟ್ಟಿದ್ದಾರೆ.
ಮಂಗಳೂರು: ಬಿಪರ್ಜಾಯ್ ಚಂಡಮಾರುತ (Biparjoy Cyclone) ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಸಾಕಷ್ಟ್ಟು ಹಾನಿಯನ್ನುಂಟು ಮಾಡಿದೆ. ಜೋರಾಗಿ ಬೀಸುತ್ತಿರುವ ಗಾಳಿಯಿಂದ ಕಡಲ್ಕೊರೆತ (sea erosion) ಹೆಚ್ಚಿದೆ ಮತ್ತು ತೀರಪ್ರದೇಶಲ್ಲಿರುವ ಗಿಡಮರಗಳು ಉರುಳಿ ಬೀಳುತ್ತಿವೆ. ಕಡಲ್ಕೊರೆತದ ಬಗ್ಗೆ ಟಿವಿ9 ಒಂದು ವಿಸ್ತೃತ ವರದಿಯನ್ನು ರವಿವಾರ ಬಿತ್ತರಿಸಿದ ಬಳಿಕ ಮಂಗಳೂರಿನವರೇ ಆಗಿರುವ ಸ್ಪೀಕರ್ ಯುಟಿ ಖಾದರ್ (Speaker UT Khader) ಮತ್ತು ದಕ್ಷಿಣ ಕನ್ನಡ ಜಿಲ್ಲೆ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ತೀರದಲ್ಲಿದ್ದ ಕೆಲ ಮನೆಗಳು ಸಹ ಕಡಲ್ಕೊರೆತದಿಂದಾಗಿ ಕುಸಿದು ಬಿದ್ದಿದ್ದು ಅವುಗಳಲ್ಲಿ ವಾಸವಾಗಿದ್ದ ಜನ ನೆರವಿಗಾಗಿ ಸರ್ಕಾರಕ್ಕೆ ಮೊರೆಯಿಟ್ಟಿದ್ದಾರೆ. ಸಮುದ್ರದ ನೀರು ತೀರದಲ್ಲಿರುವ ಮನೆಯೊಂದನ್ನು ಶಿಥಿಲಗೊಳಿಸುವ ದೃಶ್ಯ ಇಲ್ಲಿ ಕಾಣತ್ತದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ