ಮದ್ಯಸೇವಿಸಿ ಕರ್ತವ್ಯನಿರತ ವೈದ್ಯನ ಅವಾಂತರ: ಅಮಾನತ್ತಿಗೆ ಆದೇಶಿಸಿದ ಸಚಿವ ದಿನೇಶ್ ಗುಂಡೂರಾವ್

ಸರ್ಕಾರಿ ಕರ್ತವ್ಯನಿರತ ವೈದ್ಯನ ವಿರುದ್ಧ ಮದ್ಯಸೇವನೆ ಆರೋಪ ಹಿನ್ನಲೆ ವೈದ್ಯ ಬಾಲಕೃಷ್ಣ ಅಮಾನತ್ತಿಗೆ ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಚಿಕ್ಕಮಗಳೂರು ಡಿಹೆಚ್​ಒಗೆ ಆದೇಶ ನೀಡಿದ್ದಾರೆ.

ಮದ್ಯಸೇವಿಸಿ ಕರ್ತವ್ಯನಿರತ ವೈದ್ಯನ ಅವಾಂತರ: ಅಮಾನತ್ತಿಗೆ ಆದೇಶಿಸಿದ ಸಚಿವ ದಿನೇಶ್ ಗುಂಡೂರಾವ್
ಮದ್ಯಸೇವಿಸಿದ ವೈದ್ಯ,ಸಚಿವ ದಿನೇಶ್ ಗುಂಡೂರಾವ್
Follow us
|

Updated on: Jun 01, 2023 | 3:06 PM

ಬೆಂಗಳೂರು: ಕಳಸ ತಾಲೂಕು ಸರ್ಕಾರಿ ಕರ್ತವ್ಯನಿರತ ವೈದ್ಯನ (Docter) ವಿರುದ್ಧ ಮದ್ಯಸೇವನೆ ಆರೋಪ ಹಿನ್ನಲೆ ವೈದ್ಯ ಬಾಲಕೃಷ್ಣ ಅಮಾನತ್ತಿಗೆ ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಚಿಕ್ಕಮಗಳೂರು ಡಿಹೆಚ್​ಒಗೆ ಆದೇಶ ನೀಡಿದ್ದಾರೆ. ಕರ್ತವ್ಯನಿರತ ವೈದ್ಯನ ಅವಾಂತರದ ಬಗ್ಗೆ ಟಿವಿ9ನಲ್ಲಿ ವರದಿ ಪ್ರಸಾರ ಬೆನ್ನಲ್ಲೇ ಆರೋಗ್ಯ ಇಲಾಖೆಯಿಂದ ಕ್ರಮಕೈಗೊಳ್ಳಲಾಗಿದೆ. ಅಲ್ಲದೆ ತನಿಖೆ ಮಾಡಿ ವರದಿ ಸಲ್ಲಿಸುವಂತೆಯೂ ಸೂಚಿಸಲಾಗಿದೆ. ಮದ್ಯಸೇವನೆಯಿಂದಾಗಿ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ವೇಳೆ ಕುಸಿದುಬಿದಿದ್ದಾರೆ. ವೈದ್ಯನ ಅವಾಂತರದಿಂದ ಶಸ್ತ್ರಚಿಕಿತ್ಸೆಗೆ ಬಂದಿದ್ದ ಮಹಿಳೆಯರು ಪರದಾಡುವಂತಾಗಿದೆ.

ಟಿವಿ9ಗೆ ಚಿಕ್ಕಮಗಳೂರು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಉಮೇಶ್ ಪ್ರತಿಕ್ರಿಯೆ ನೀಡಿದ್ದು, ಘಟನೆ ಬಗ್ಗೆ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ಇದನ್ನೂ ಓದಿ: ಮದ್ಯಸೇವಿಸಿ ಆಪರೇಷನ್ ಮಾಡಲು ಬಂದ ಡಾಕ್ಟರ್, ಶಸ್ತ್ರಚಿಕಿತ್ಸೆ ಸಿದ್ಧತೆ ,ಮಾಡಿಕೊಳ್ಳುವ ವೇಳೆ ಕುಸಿದು ಬಿದ್ದ

ಸಂತಾನ ಹರಣ ಶಸ್ತ್ರ ಚಿಕಿತ್ಸೆ ವೇಳೆ ಕುಸಿದುಬಿದ್ದ ವೈದ್ಯ ಬಾಲಕೃಷ್ಣ

ಶಸ್ತ್ರ ಚಿಕಿತ್ಸೆಗೆ‌ ಎಲ್ಲಾ ಸಿದ್ದತೆ ಮಾಡಿಕೊಳ್ಳುವ ವೇಳೆ ಆಪರೇಷನ್ ಥಿಯೇಟರ್​ನಲ್ಲಿ ವೈದ್ಯ ಬಾಲಕೃಷ್ಣ ಕುಸಿದು ಬಿದ್ದಿದ್ದಾರೆ. ಅಸ್ವಸ್ಥಗೊಂಡ ವೈದ್ಯನನ್ನ ಸಿಬ್ಬಂದಿಗಳು ಕೊಪ್ಪ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಇದನ್ನೂ ಓದಿ: Chikkamagaluru: ನಕಲಿ ಬೀಜ ಮಾರಾಟ; ಮೂರೇ ದಿನಕ್ಕೆ ಕೊಳೆತು ಹೋದ ಆಲೂಗೆಡ್ಡೆ, ಕಂಗಾಲಾದ ರೈತರು

ಇತ ಬೆಳಗ್ಗೆ 8 ಗಂಟೆಗೆ ಅನಸ್ತೇಷಿಯಾ ನೀಡಿ ಮಧ್ಯಾಹ್ನ 2 ಗಂಟೆಯಾದರೂ ಆಪರೇಷನ್ ಮಾಡಿಲ್ಲ. ಹೋಗಿ ನೋಡಿದಾಗ ಬೆಳಗ್ಗೆಯಿಂದ ಆಪರೇಷನ್ ಥಿಯೇಟರ್​ನಲ್ಲೆ ವೈದ್ಯ ನಿದ್ರೆ ಮಾಡಿದ್ದಾರೆ. ಶಸ್ತ್ರ ಚಿಕಿತ್ಸೆಗೆ ವೈದ್ಯರಿಲ್ಲದೆ ಅನಸ್ತೇಷಿಯಾ ಪಡೆದ ಮಹಿಳೆಯರು ಪರದಾಡುತ್ತಿದ್ದರು. ಬಳಿಕ ವೈದ್ಯ ಬಾಲಕೃಷ್ಣ ವಿರುದ್ಧ ಶಿಸ್ತು ಕ್ರಮಕ್ಕೆ‌ ರೋಗಿಗಳ ಸಂಬಂಧಿಕರು ಆಗ್ರಹಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.