Gruha Jyoti Scheme; ಬಾಡಿಗೆ ಮನೆಯಲ್ಲಿ ವಾಸಿಸುವವರು, ಹೊಸ ಮನೆ ಕಟ್ಟಿದವರಿಗೂ ಗೃಹಜ್ಯೋತಿ ಯೋಜನೆ ಪ್ರಯೋಜನ ಸಿಗಲಿದೆ: ಕೆಜೆ ಜಾರ್ಜ್
ಇಂಧನ ಸಚಿವ ಜಾರ್ಜ್ ಸೋಮವಾರ ಪತ್ರಿಕಾ ಗೋಷ್ಟಿಯೊಂದನ್ನು ನಡೆಸಿ ಜನರ ಗೊಂದಲಗಳನ್ನು ನಿವಾರಿಸಲಿದ್ದಾರೆ.
ಬೆಂಗಳೂರು: ಗೃಹಜ್ಯೋತಿ ಗ್ಯಾರಂಟಿಗೆ ಸಂಬಂಧಿಸಿದಂತೆ ಜನರಲ್ಲಿ ಸಮಸ್ಯೆ, ಗೊಂದಲಗಳಿದ್ದರೆ, ಸೋಮವಾರ ಒಂದು ಸುದ್ದಿಗೋಷ್ಟಿ ನಡೆಸಿ ಎಲ್ಲವನ್ನು ಬಗೆಹರಿಸುವುದಾಗಿ ಇಂಧನ ಸಚಿವ ಕೆಜೆ ಜಾರ್ಜ್ (KJ George) ಹೇಳಿದರು. ಇಂದು ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು (Siddaramaiah) ಭೇಟಿಯಾದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸಚಿವ ಜಾರ್ಜ್, ಎಲ್ಲ ವಿದ್ಯುತ್ ಬಳಕೆದಾರರು (consumers) 12 ತಿಂಗಳು ಬಳಸಿದ ಯೂನಿಟ್ ಗಳ ಸರಾಸರಿ ಜೊತೆಗೆ ಹೆಚ್ಚುವರಿ ಶೇಕಡ ಹತ್ತರಷ್ಟು ಯೂನಿಟ್ 200ಕ್ಕಿಂತ ಕಮ್ಮಿಯಿದ್ದರೆ ಬಿಲ್ ಪಾವತಿಸಬೇಕಿರದ ನಿಯಮ ಅನ್ವಯಿಸುತ್ತದೆ. ಹೊಸ ಮನೆ ಕಟ್ಟುವವರಿಗೆ ಮತ್ತು ಬಾಡಿಗೆ ಮನೆಯಲ್ಲಿ ವಾಸಮಾಡುವವರಿಗೂ ಗ್ರಹಜ್ಯೋತಿ ಯೋಜನೆಯ ಪ್ರಯೋಜನ ಲಭ್ಯವಾಗಲಿದೆ ಎಂದು ಸಚಿವ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

