Kolar: ಸಿದ್ದರಾಮಯ್ಯ ಸಾಲಮನ್ನಾ ಮಾಡ್ತೀನಿ ಅಂತ ಹೇಳವ್ರೇ, ಮರುಪಾವತಿ ಮಾಡಲ್ಲ ಅಂತ ಹಟಕ್ಕೆ ಬಿದ್ದ ಮಹಿಳೆಯರು!

Kolar: ಸಿದ್ದರಾಮಯ್ಯ ಸಾಲಮನ್ನಾ ಮಾಡ್ತೀನಿ ಅಂತ ಹೇಳವ್ರೇ, ಮರುಪಾವತಿ ಮಾಡಲ್ಲ ಅಂತ ಹಟಕ್ಕೆ ಬಿದ್ದ ಮಹಿಳೆಯರು!

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 10, 2023 | 10:36 AM

ಸರ್ಕಾರ ಮಹಿಳೆಯರು ಪಡೆದಿರುವ ಸಾಲಗಳ ಬಗ್ಗೆ ಒಂದು ನಿರ್ಧಾರ ಪ್ರಕಟಿಸುವವರೆಗೆ ಇಂಥ ಸನ್ನಿವೇಶಗಳು ಪ್ರತಿದಿನ ಕಾಣಲಿವೆ.

ಕೋಲಾರ: ಸಿದ್ದರಾಮಯ್ಯ ಸರ್ಕಾರಕ್ಕೆ (Siddaramaiah Government) ಇದು ಪೀಕಲಾಟಕ್ಕಿಟ್ಟುಕೊಳ್ಳುವ ವಿಷಯವಾಗಲಿದೆ. ಡಿಸಿಸಿ, ಸ್ವ ಸಹಾಯ ಗುಂಪು, ಮೈಕ್ರೋ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದಿರುವ ಮಹಿಳೆಯರು ಸುತಾರಾಂ ಮರುಪಾವತಿ (repayment) ಮಾಡೋದಿಲ್ಲ ಅಂತ ಹಟಕ್ಕೆ ಬಿದ್ದಿದ್ದಾರೆ. ಕಾಂಗ್ರೆಸ್ ಪಕ್ಷ (Congress party) ಅಧಿಕಾರಕ್ಕೆ ಬಂದರೆ ಸಾಲಮನ್ನಾ ಮಾಡೋದಾಗಿ ಸಿದ್ದರಾಮಯ್ಯ ಹೇಳಿದ್ದಾರೆ ಅನ್ನೋದು ಅವರ ವಾದ. ಕೋಲಾರ ಮಿಲ್ಲತ್ ನಗರದ ನಿವಾಸಿಗಳಾಗಿರುವ ಈ ಮಹಿಳೆಯರು ಸಾಲ ವಸೂಲಾತಿಗೆ ಹೋದ ಡಿಸಿಸಿ ಬ್ಯಾಂಕ್ ಸಿಬ್ಬಂದಿಗೆ ಅದನ್ನೇ ಹೇಳುತ್ತಿದ್ದಾರೆ. ಸಾಲದ ಕಂತು ತೆಗೆದುಕೊಳ್ಳದ ಹೊರತು ಸ್ಥಳದಿಂದ ಕದಲುವುದಿಲ್ಲ ಎಂದು ಸಿಬ್ಬಂದಿ ಮಹಿಳೆಯರ ಮನೆಗಳ ಮುಂದೆ ಕೂತುಬಿಟ್ಟಿದ್ದಾರೆ. ಸರ್ಕಾರ ಮಹಿಳೆಯರು ಪಡೆದಿರುವ ಸಾಲಗಳ ಬಗ್ಗೆ ಒಂದು ನಿರ್ಧಾರ ಪ್ರಕಟಿಸುವವರೆಗೆ ಇಂಥ ಸನ್ನಿವೇಶಗಳು ಪ್ರತಿದಿನ ಕಾಣಲಿವೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ