Loading video

ಬೆಂಗಳೂರು ಕರಗ ಶಕ್ತ್ಯೋತ್ಸವ ವೇಳೆ ಗಲಾಟೆ: ಯುವಕರಿಗೆ ಥಳಿತ​

| Updated By: ಗಂಗಾಧರ​ ಬ. ಸಾಬೋಜಿ

Updated on: Apr 13, 2025 | 9:12 AM

ಬೆಂಗಳೂರು ಕರಗ ಶಕ್ತ್ಯೋತ್ಸವದ ಮುನ್ನ ಧರ್ಮರಾಯ ಸ್ವಾಮಿ ದೇಗುಲದ ಬಳಿ ಕೆಲ ಯುವಕರ ನಡುವೆ ಗಲಾಟೆ ನಡೆಯಿತು. ವೀರಕುಮಾರರು ಗಲಾಟೆ ನಿಲ್ಲಿಸಲು ಪ್ರಯತ್ನಿಸಿದಾಗ, ಯುವಕರನ್ನು ಥಳಿಸಿ ಬುದ್ಧಿ ಕಲಿಸಿದರು. ಈ ಘಟನೆಯಿಂದ ಕರಗೋತ್ಸವದ ವಾತಾವರಣ ಕೆಲಕಾಲ ಅಶಾಂತವಾಗಿತ್ತು. ಈ ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರು, ಏಪ್ರಿಲ್​ 13: ಐತಿಹಾಸಿಕ ಬೆಂಗಳೂರು ಕರಗ (Karaga) ಶಕ್ತೋತ್ಸವ ತಡರಾತ್ರಿ ವಿಜ್ರಂಭಣೆಯಿಂದ ನಡೆಯಿತು. ಕರಗ ಉತ್ಸವ ಸಾಗುವ ಮೊದಲು ಧರ್ಮರಾಯ ಸ್ವಾಮಿ ದೇಗುಲದ ಬಳಿ ಗಲಾಟೆ ಮಾಡಿದ ಯುವಕರಿಗೆ ಥಳಿಸಲಾಗಿದೆ. ಯಾವ ಕಾರಣಕ್ಕೆ ಗಲಾಟೆ ನಡೆದಿದೆ ತಿಳಿದುಬಂದಿಲ್ಲ. ವೀರಕುಮಾರರ ಮನವಿ ಬೆನ್ನಲ್ಲೇ ಗಲಾಟೆ ನಿಲ್ಲಿಸಲಾಗಿದೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: Apr 13, 2025 09:12 AM