ಗೋಕರ್ಣಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ ರಿಷಬ್; ಗೆಳೆಯ ರಕ್ಷಿತ್ ಹೆಸರಲ್ಲೂ ವಿಶೇಷ ಸಂಕಲ್ಪ

|

Updated on: Jun 07, 2024 | 8:40 AM

ರಿಷಬ್ ಅವರು ಈಗ ಅವರು ಪತ್ನಿ ಜೊತೆ ಗೋಕರ್ಣಕ್ಕೆ ತೆರಳಿದ್ದಾರೆ. ಮಹಾಬಲೇಶ್ವರ ದೇವಾಲಯದಲ್ಲಿ ಮಹಾಗಣಪತಿಗೆ ಪೂಜೆ ಸಲ್ಲಿಸಿದ್ದಾರೆ. ಇದರ ಜೊತೆಗೆ ಗೋಕರ್ಣದ ಶಕ್ತಿ ದೇವತೆ ಸ್ಮಶಾನ ಕಾಳಿಗೆ ವಿಶೇಷ ಪೂಜೆ ಸಲ್ಲಿಕೆ ಆಗಿದೆ. ರಿಷಬ್ ಅವರು ‘ಕಾಂತಾರ 2’ ಚಿತ್ರದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ

ರಿಷಬ್ ಶೆಟ್ಟಿ (Rishab Shetty) ಅವರಿಗೆ ದೇವರ ಮೇಲೆ ಅಪಾರ ಭಕ್ತಿ ಇದೆ. ಅವರು ಈಗ ಅವರು ಪತ್ನಿ ಜೊತೆ ಗೋಕರ್ಣಕ್ಕೆ ತೆರಳಿದ್ದಾರೆ. ಮಹಾಬಲೇಶ್ವರ ದೇವಾಲಯದಲ್ಲಿ ಮಹಾಗಣಪತಿಗೆ ಪೂಜೆ ಸಲ್ಲಿಸಿದ್ದಾರೆ. ಇದರ ಜೊತೆಗೆ ಗೋಕರ್ಣದ ಶಕ್ತಿ ದೇವತೆ ಸ್ಮಶಾನ ಕಾಳಿಗೆ ವಿಶೇಷ ಪೂಜೆ ಸಲ್ಲಿಕೆ ಆಗಿದೆ. ಜೂನ್ 6ರಂದು ರಕ್ಷಿತ್ ಶೆಟ್ಟಿಗೆ ಜನ್ಮದಿನ. ಅವರ ಹೆಸರಲ್ಲೂ ರಿಷಬ್ ವಿಶೇಷ ಸಂಕಲ್ಪ ಮಾಡಿದ್ದಾರೆ. ಇದರ ಜೊತೆಗೆ ‘ಕಾಂತಾರ 2’ ಚಿತ್ರದ ಗೆಲುವಿಗೂ ಕೋರಿದ್ದಾರೆ. ರಿಷಬ್ ಅವರು ‘ಕಾಂತಾರ 2’ ಚಿತ್ರದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈಗಾಗಲೇ ಒಂದು ಹಂತದ ಶೂಟಿಂಗ್ ಪೂರ್ಣಗೊಂಡಿದೆ. ಶೀಘ್ರವೇ ಎರಡನೇ ಹಂತದ ಶೂಟಿಂಗ್ ಆರಂಭ ಆಗಲಿದೆಯಂತೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.