‘ಕಾಂತಾರ’ ಕನೆಕ್ಷನ್​ ಕೊಟ್ಟು ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ತಂಡದ ಕಾಲೆಳೆದ ರಿಷಬ್ ಶೆಟ್ಟಿ

Updated on: Jul 11, 2023 | 9:56 AM

‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ಸೆಟ್ಟೇರಿ ಬಹಳ ವರ್ಷಗಳು ಕಳೆದಿದ್ದವು. ಸಿನಿಮಾ ಜುಲೈ 21ರಂದು ರಿಲೀಸ್ ಆಗಲಿದೆ. ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮದಲ್ಲಿ ಭಾಗಿ ಆದ ರಿಷಬ್ ಶೆಟ್ಟಿ ಅವರು ಕೆಲವು ವಿಚಾರಗಳನ್ನು ಮಾತನಾಡಿದರು.

‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ಸೆಟ್ಟೇರಿ ಬಹಳ ವರ್ಷಗಳು ಕಳೆದಿದ್ದವು. ಈ ಚಿತ್ರದ ಪ್ರೋಮೋ ಶೂಟ್​ನಲ್ಲಿ ಪುನೀತ್ ಕೂಡ ಭಾಗಿ ಆಗಿದ್ದರು. ಈ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಸಿನಿಮಾ ಜುಲೈ 21ರಂದು ರಿಲೀಸ್ ಆಗಲಿದೆ. ಸಿನಿಮಾ ಬಗ್ಗೆ ಒಂದು ಭರವಸೆ ಮೂಡಿದೆ. ಈ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮದಲ್ಲಿ ಭಾಗಿ ಆದ ರಿಷಬ್ ಶೆಟ್ಟಿ ಅವರು ಕೆಲವು ವಿಚಾರಗಳನ್ನು ಮಾತನಾಡಿದರು. ‘ಕಾಂತಾರ (Kantara Movie) ಚಿತ್ರಕ್ಕಿಂತ ಮೊದಲೇ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ಶೂಟಿಂಗ್ ಶುರುವಾಗಿತ್ತು. ನಮ್ಮ ಸಿನಿಮಾ ರಿಲೀಸ್ ಆಗಿ ‘ಕಾಂತಾರ 2’ಗೆ ರೆಡಿ ಆಗುತ್ತಿದ್ದೇವೆ. ಇನ್ನೊಂದು ಸ್ವಲ್ಪ ತಡ ಆಗಿದ್ದರೂ ‘ಕಾಂತಾರ 2’ ಶೂಟಿಂಗ್ ಶುರುವಾಗುತ್ತಿತ್ತು. ಅದಕ್ಕೂ ಮೊದಲೇ ಈ ಚಿತ್ರವನ್ನು ತೆರೆಗೆ ತರಲಾಗುತ್ತಿದೆ’ ಎಂದರು ಅವರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published on: Jul 11, 2023 09:45 AM
Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More