‘ಕಾಂತಾರ ಚಿತ್ರವೇ ನನ್ನ ಆಲೋಚನೆಯಲ್ಲಿ ಇರಲಿಲ್ಲ’; ‘ಕಾಂತಾರ 2’ ಬಗ್ಗೆ ರಿಷಬ್ ಮಾತು

| Updated By: ರಾಜೇಶ್ ದುಗ್ಗುಮನೆ

Updated on: Oct 25, 2022 | 8:59 PM

‘ಕಾಂತಾರ’ ಚಿತ್ರಕ್ಕೆ ಸೀಕ್ವೆಲ್ ಬರಹುದು ಎಂಬ ಸೂಚನೆ ಕ್ಲೈಮ್ಯಾಕ್ಸ್ನಲ್ಲಿ ಸಿಕ್ಕಿದೆ. ಇದಕ್ಕೆ ರಿಷಬ್ ಅವರು ಟಿವಿ9 ಕನ್ನಡಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

‘ಕಾಂತಾರ’ ಸಿನಿಮಾ (Kantara Movie) ಸೂಪರ್ ಹಿಟ್ ಆಗಿದೆ. ಸಾಮಾನ್ಯವಾಗಿ ಯಶಸ್ಸು ಕಂಡ ಚಿತ್ರಗಳಿಗೆ ಸೀಕ್ವೆಲ್ ಬರುತ್ತದೆ. ‘ಕಾಂತಾರ’ ಚಿತ್ರಕ್ಕೂ ಸೀಕ್ವೆಲ್ ಬರಹುದು ಎಂಬ ಸೂಚನೆ ಕ್ಲೈಮ್ಯಾಕ್ಸ್​ನಲ್ಲಿ ಸಿಕ್ಕಿದೆ. ಇದಕ್ಕೆ ರಿಷಬ್ (Rishab Shetty) ಅವರು ಟಿವಿ9 ಕನ್ನಡಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ‘ಕಾಂತಾರವೇ ನನ್ನ ಆಲೋಚನೆಯಲ್ಲಿ ಇರಲಿಲ್ಲ. ಈಗ ಈ ಚಿತ್ರ ತೆರೆಕಂಡು ಯಶಸ್ಸು ಕಂಡಿದೆ. ಪಾರ್ಟ್​ 2 ಬಗ್ಗೆ ಈಗ ಏನನ್ನೂ ಹೇಳಲ್ಲ. ಆ ಬಗ್ಗೆ ನೋ ಕಮೆಂಟ್ಸ್​. ಮುಂದೆ ನೋಡೋಣ’ ಎಂದಿದ್ದಾರೆ ರಿಷಬ್.